CrimeDistricts

ಫೇಸ್‌ಬುಕ್‌ನಲ್ಲಿ ಬಂತು ಲಿಂಕ್‌; ಚಿಕ್ಕಮಗಳೂರು ಮಹಿಳೆಗೆ 91 ಲಕ್ಷ ಪಂಗನಾಮ!

ಚಿಕ್ಕಮಗಳೂರು; ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆಗಳು ಹೆಚ್ಚಾಗುತ್ತಿವೆ.. ಆದ್ರೂ ಕೂಡಾ ಮೋಸಹೋಗುವವರು ಹೆಚ್ಚಾಗುತ್ತಲೇ ಇದ್ದಾರೆ.. ಬಹುಬೇಗ ಶ್ರೀಮಂತರಾಗುವ ಆಸೆಗಾಗಿ, ಹಣ ಡಬಲ್‌ ಆಗುತ್ತೆ ಎಂಬ ದುರಾಸೆಯಿಂದಾಗಿ ಸಂಪಾದಿಸಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ.. ಇದೇ ಕಾರಣಕ್ಕೆ ಚಿಕ್ಕಮಗಳೂರಿನ ಮಹಿಳೆಯೊಬ್ಬರು ಬರೋಬ್ಬರಿ 91 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ..
ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನೋಡಿ ಮಹಿಳೆಯೊಬ್ಬರು ಸ್ಟಾಕ್‌ ಮಾರ್ಕೆಟ್‌ ಟ್ರೇಡಿಂಗ್‌ನಲ್ಲಿ ಹಣ ಹಾಕಿದ್ದಾಳೆ.. ಫೇಸ್‌ಬುಕ್‌ನಲ್ಲಿ ಬಂದ ಲಿಂಕ್‌ ಕ್ಲಿಕ್‌ ಮಾಡಿ ವಾಟ್ಸ್‌ ಆಪ್‌ ಗ್ರೂಪ್‌ಗೆ ಜಾಯಿನ್‌ ಆಗಿದ್ದಾಳೆ.. ಅದ್ರಲ್ಲಿ ಹಣ ಇನ್ವೆಸ್ಟ್‌ ಮಾಡಿದರೆ ಹಣ ಡಬಲ್‌ ಮಾಡಿಕೊಡುವುದಾಗಿ ಇವರಿಗೆ ಯಾರೋ ಕರೆ ಮಾಡಿದ್ದಾರೆ.. ಅವರನ್ನು ನಂಬಿದ ಮಹಿಳೆ ಹಂತ ಹಂತವಾಗಿ ಹಣ ಕಳುಹಿಸುತ್ತಾ ಹೋಗಿದ್ದಾಳೆ.. ಹೀಗೆ ಆಕೆ ಒಟ್ಟು 91 ಲಕ್ಷದ 4 ಸಾವಿರದ 315 ರೂಪಾಯಿ ಹಣವನ್ನು ಕಳುಹಿಸಿದ್ದಾಳೆ.. ಅಷ್ಟು ಹಣ ಕಳೆದುಕೊಂಡ ಮೇಲೆ ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾಗಿದೆ..
ಇದೀಗ ಮಹಿಳೆ ಗೋಳು ತೋಡಿಕೊಳ್ಳುತ್ತಿದ್ದಾರೆ.. ಚಿಕ್ಕಮಗಳೂರು ನಗರದ ಸೆನ್‌ ಠಾಣೆಗೆ ದೂರು ಕೊಟ್ಟಿದ್ದಾಳೆ.. ತನ್ನ ಹಣ ವಾಪಸ್‌ ಕೊಡಿಸುವಂತೆ ದುಂಬಾಲು ಬಿದ್ದಿದ್ದಾಳೆ.. ಪೊಲೀಸರು ಈ ಬಗ್ಗೆ ಎಚ್ಚರಿಕೆ ಕೊಟ್ಟರೂ ಜನರು ಮೋಸ ಹೋಗುತ್ತಲೇ ಇದ್ದಾರೆ..

Share Post