ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ!
ಅಮೆರಿಕ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಕಳೆದ ಕೆಲ ತಿಂಗಳಿಂದ ಎರಡು ಬಾರಿ ಗುಂಡಿನ ದಾಳಿ ನಡೆದಿತ್ತು.. ಈಗ ಕಮಲಾ ಹ್ಯಾರೀಸ್ ಸರದಿ.. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರೀಸ್ ಅವರ ಕಚೇರಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ..
ಅಮೆರಿಕದ ಅರಿಜೋನಾದಲ್ಲಿರುವ ಕಮಲಾ ಹ್ಯಾರೀಸ್ ಅವರ ಕಚೇರಿ ಮೇಲೆ ದುಷ್ಕರ್ಮಿಗಳ ಗುಂಪು ನಿರಂತರವಾಗಿ ಗುಂಡಿನ ದಾಳಿ ನಡೆಸಿದೆ.. ಮಧ್ಯರಾತ್ರಿ ಆಗಮಿಸಿರುವ ದುಷ್ಕರ್ಮಿಗಳು ನಿರಂತರವಾಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಭಾರತೀಯ ಮೂಲದವರಾಗಿರುವ ಕಮಲಾ ಹ್ಯಾರೀಸ್ ಅವರು ಈ ಬಾರಿ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ.. ಅವರೂ ಕೂಡಾ ತುಂಬಾ ಹುರುಪಿನಿಂದ ಪ್ರಚಾರ ಕೈಗೊಂಡಿದ್ದು, ನಿಧಿ ಸಂಗ್ರಹ ಕೂಡಾ ಮಾಡುತ್ತಿದ್ದಾರೆ.. ಹೀಗಿರುವಾಗಲೇ ಈ ಘಟನೆ ನಡೆದಿದೆ..
ಕಮಲಾ ಹ್ಯಾರೀಸ್ ಅವರಯ ಅಮೆರಿಕದ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಶೇಕಡಾ 4 ಪಾಯಿಂಟ್‌ಗಳ ಮುನ್ನಡೆ ಪಡೆದುಕೊಂಡಿದ್ದಾರೆ.. ಕಳೆದ ರಾತ್ರಿ ಕಚೇರಿ ಮೇಲೆ ಗುಂಡು ಹಾರಿಸಿದಾಗ ಅದೃಷ್ಟವಶಾತ್ ಕಚೇರಿಯಲ್ಲಿ ಯಾರೂ ಇರಲಿಲ್ಲ.. ಹೀಗಾಗಿ ಯಾರಿಗೂ ಯಾವುದೇ ಪ್ರಾಣಹಾನಿಯಾಗಿಲ್ಲ..