ಮುಡಾ ಆಯ್ತು, ಈಗ ಅರ್ಕಾವತಿ ಸರದಿ!; ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು!
ಬೆಂಗಳೂರು; ಮುಡಾ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಈ ವಿಚಾರದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.. ಬೆಂಗಳೂರಿನ ಅರ್ಕಾವತಿ ಲೇಔಟ್ ನಲ್ಲಿ ನಿವೇಶನ ಪಡೆದವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ಶಿವಲಿಂಗಪ್ಪ, ರಾಜಶೇಖರ್, ರಾಮಚಂದ್ರಯ್ಯ, ವೆಂಕಟಕೃಷ್ಣಪ್ಪ ಎಂಬುವವರು ಅರ್ಕಾವತಿ ಲೇಔಟ್‌ನಲ್ಲಿ ನಿವೇಶನ ಪಡೆದಿದ್ದಾರೆ.. ಆದ್ರೆ ಅಧಿಕಾರ ದುರ್ಬಳಕೆಯಿಂದ ನಿವೇಶನದಾರರಿಗೆ ತೊಂದರೆಯಾಗುತ್ತಿದೆ.. ಅರ್ಕಾವತಿ ಲೇಔಟ್‌ನಲ್ಲಿ ಫಲಾನುಭವಿಗಳಿಗೆ ಹಂಚಿಕೆಯಾಗಿದ್ದ ಸೈಟುಗಳು ಭೂಗಳ್ಳರ ಪಾಲಾಗುತ್ತಿದೆ.. ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ..
ಬೆಂಗಳೂರಿನ ಜಕ್ಕೂರು, ಕೆ.ನಾರಾಯಣಪುರ, ಸಂಪಿಗೆಹಳ್ಳಿ ಹಾಗೂ ಥಣಿಸಂದ್ರ ಸೇರಿದಂತೆ ಸುಮಾರು 16ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಯ 800 ಎಕರೆ ಜಮೀನನ್ನು ರೈತರಿಂದ ಬಿಡಿಎ ಖರೀದಿ ಮಾಡಿತ್ತು.. ಅದನ್ನು ನಿವೇಶನಗಳನ್ನಾಗಿ ಪರಿವರ್ತನೆ ಮಾಡಿ ಅರ್ಕಾವತಿ ಲೇಔಟ್ ಮಾಡಲಾಗಿತ್ತು.. 2004ರಲ್ಲಿ ಈ ಲೇಔಟ್‌ನಲ್ಲಿ ಸೈಟು ಹಂಚಿಕೆ ಸಂಬಂಧ ಅರ್ಜಿ ಅಹ್ವಾನ ನೀಡಲಾಗಿತ್ತು.. ಇಲ್ಲಿ ನಿವೇಶನ ಪಡೆಯೋದಕ್ಕಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಅರ್ಜಿ ಹಾಕಿದ್ದರು.. ನಂತರ ಸುಮಾರು 12 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು.. ಇವರಿಗೆ ಬಿಡಿಎ ರಿಜಿಸ್ಟರ್ ಕಮ್ ಸೇಲ್ ಡೀಡ್ ನೀಡಿತ್ತು.. ನಿವೇಶನದಾರರು 2006ರಿಂದ ಇಂದಿನವರೆಗೂ ತೆರಿಗೆ ಕಟ್ಟುತ್ತಿದ್ದಾರೆ..
ಆದ್ರೆ 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್‌ನಲ್ಲಿ ಹಂಚಿಕೆಯಾದ ನಿವೇಶಗಳನ್ನು ವಾಪಸ್ ಪಡೆದಿದೆ.. ಇದರಿಂದ ನಿವೇಶನದಾರರು ಅಲ್ಲಿಗೆ ಹೋಗಲು ಬಿಡುತ್ತಿಲ್ಲ.. ಇತ್ತ ರೈತರಿಗೂ ಜಮೀನು ವಾಪಸ್ ಕೊಟ್ಟಿಲ್ಲ.. ಈ ಕೇಳಿದರೆ ಅರ್ಕಾವತಿ ಲೇಔಟ್‌ನಲ್ಲಿ ಸೈಟುಗಳಿಲ್ಲ, ಕೆಂಪೇಗೌಡ ಲೇಔಟ್‌ನಲ್ಲಿ ಕೊಡಿಸೋಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.. ಇದನ್ನು ನೋಡುತ್ತಿದ್ದರೆ ಅರ್ಕಾವತಿ ಲೇಔಟ್‌ನಲ್ಲಿ ಅಕ್ರಮ ಎಸಗಿರುವಂತೆ ಕಾಣುತ್ತಿದ್ದು, ಆ ಜಾಗ ಭೂಗಳ್ಳರ ಪಾಲಾಗುತ್ತಿದೆ.. ಇದ್ರಿಂದ ಅಸಲಿ ನಿವೇಶನದಾರರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಆರೋಪ ಮಾಡಲಾಗಿದೆ..