LifestyleScience

ಹೆಣ್ಣು, ಗಂಡು ಎರಡೂ ಭಾವನೆ ಇರುವ ಪಕ್ಷಿ ಪತ್ತೆ..!; ವಿಜ್ಞಾನಲೋಕದಲ್ಲೊಂದು ಅಚ್ಚರಿ!

ಬೆಂಗಳೂರು; ಲಿಂಗತ್ವ ಅಲ್ಪಸಂಖ್ಯಾತರನ್ನು ಮನುಷ್ಯರಲ್ಲಿ ಸಾಕಷ್ಟು ಜನರನ್ನು ನೋಡಿದ್ದೇವೆ.. ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆಗಳನ್ನು ಹೊಂದಿರುವ, ಹೆಣ್ಣಾಗಿ ಹುಟ್ಟಿ ಗಂಡಿನ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಸಿಗುತ್ತಾರೆ.. ಅದ್ರಲ್ಲೂ ಕೂಡಾ ಗಂಡಾಗಿ ಹುಟ್ಟಿದವರು ಹೆಣ್ಣಾಗಿ ಬದಲಾಗಿ ಹೆಣ್ಣಿನಂತೆ ಸಿಂಗಾರ ಮಾಡಿಕೊಂಡು ತಿರುಗಾಡುತ್ತಾರೆ.. ಇದು ಮನುಷ್ಯರಲ್ಲಿ ಮಾತ್ರ ಅಲ್ಲ, ಪಕ್ಷಿಗಳಲ್ಲೂ ಈ ರೀತಿಯ ವೈರುದ್ಯಗಳಿವೆ.. ಗಂಡು ಹಾಗೂ ಹೆಣ್ಣು ಎರಡೂ ಗುಣಗಳನ್ನು ಹೊಂದಿರುವ ಪಕ್ಷಿಯನ್ನು ಪಕ್ಷಿ ತಜ್ಞರು ಪತ್ತೆ ಹಚ್ಚಿದ್ದಾರೆ.. ಈ ಪಕ್ಷಿಯಲ್ಲಿ ಮಹಿಳೆ ಹಾಗೂ ಗಂಡಸು ಎರಡೂ ಗುಣಗಳೂ ಇವೆ.. ಅರ್ಧನಾರೀಶ್ವರ ರೂಪದಲ್ಲಿ ಈ ಪಕ್ಷಿ ಕಂಡುಬಂದಿದ್ದು, ವಿಜ್ಞಾನಕ್ಕೆ ಒಂದು ಅಚ್ಚರಿ ಎನಿಸಿದೆ.. ಈ ಬಗ್ಗೆ ಇನ್ನೂ ಅಧ್ಯಯನಗಳು ಮುಂದುವರೆದಿವೆ..
ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗುವ ಮೀನುಗಳಿವೆ.. ಕೆಲ ಕೀಟಗಳಲ್ಲೂ ಈ ಬದಲಾವಣೆಯನ್ನು ವಿಜ್ಞಾನಿಗಳ ಕಂಡುಹಿಡಿದಿದ್ದಾರೆ.. ಆದ್ರೆ ಪಕ್ಷಿ ಸಂಕುಲದಲ್ಲಿ ಇಂತಹ ಪಕ್ಷಿಗಳು ಅಪರೂಪದಲ್ಲಿ ಅಪರೂಪ.. ಹೀಗಾಗಿ ವಿಜ್ಞಾನಕ್ಕೆ ಇದೊಂದು ಅಚ್ಚರಿ.. ಇಂತಹ ಜೀವಿಗಳ ಎರಡೂ ಲಿಂಗಗಳ ಗುಣಗಳನ್ನು ಹೊಂದಿರುವುದರಿಂದ ಇವನ್ನು ‘ಗೈನಾಂಡ್ರೊಮಾರ್ಫ್’ ಎಂದು ಕರೆಯುತ್ತಾರೆ.. ನೂರು ವರ್ಷಗಳ ಹಿಂದೆ ಇಂತಹದ್ದೊಂದು ಹಕ್ಕಿ ಇತ್ತು ಎಂದು ಹೇಳಲಾಗುತ್ತದೆ.. ಆದ್ರೆ ಅದು ಎಲ್ಲಿ ಹೋಯಿತು ಗೊತ್ತಿಲ್ಲ.. ಹೀಗಿರುವಾಗಲೇ ಇಬ್ಬರು ವಿಜ್ಞಾನಿಗಳು ಇಂತಹದ್ದೇ ಮತ್ತೊಂದು ಹಕ್ಕಿಯನ್ನು ಪತ್ತೆ ಹಚ್ಚಿದ್ದಾರೆ..
ನ್ಯೂಜಿಲೆಂಡ್ ವಿಜ್ಞಾನಿ, ಒಟಾಗೋ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರಜ್ಞ ಪ್ರೊಫೆಸರ್ ಹ್ಯಾಮಿಶ್ ಸ್ಪೆನ್ಸರ್ ಅವರು ಕೊಲಂಬಿಯಾದಲ್ಲಿ ಇಂತಹ ಅಪರೂಪದ ಪಕ್ಷಿಯನ್ನು ಗುರುತಿಸಿದ್ದಾರೆ.. ಈ ಪಕ್ಷಿಯು ಅರ್ಧ ಹಸಿರು ಮತ್ತು ಅರ್ಧ ನೀಲಿ ಬಣ್ಣದಲ್ಲಿದೆ.. ಇದಕ್ಕೆ ಎರಡೂ ಸಂತಾನೋತ್ಪತ್ತಿ ಅಂಗಗಳಿವೆಯಂತೆ.. ಅದರ ಧ್ವನಿ ಕೂಡಾ ಎರಡು ರೀತಿಯಲ್ಲಿದ್ದು, ಎರಡೂ ರೀತಿಯಲ್ಲಿ ವರ್ತಿಸುತ್ತೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ..

Share Post