CrimeDistricts

ಅಂಬಾರಿ ಹೊತ್ತಿದ್ದ ಆನೆ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು!

ಆನೇಕಲ್; ದಸರಾ ಹಿನ್ನೆಲೆಯಲ್ಲಿ ನಿನ್ನೆ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಅಂಬಾರಿ ಉತ್ಸವ ನಡೆಯಿತು. ಉತ್ಸವದ ನಂತರ ಅಂಬಾರಿ ಹೊತ್ತಿದ್ದ ಆನೆಯನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಈ ಲಾರಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಅದರ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಸಮೀಪದ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಆರೋಗ್ಯ ಸ್ವಾಮಿ (45 ವರ್ಷ) ಎಂದು ಗುರುತಿಸಲಾಗಿದೆ. ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಅಂಬಾರಿ ಉತ್ಸವದ ಅಂಬಾರಿ ಹೊರಲು ತಿರುಚ್ಚಿಯಿಂದ ಆನೆಯನ್ನು ಕರೆತರಲಾಗಿತ್ತು. ಅಂಬಾರಿ ಉತ್ಸವ ಮುಗಿಸಿಕೊಂಡು, ಆನೆಯನ್ನು ಈಚರ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು.

Share Post