CrimeDistricts

ಗಂಡ ಜೈಲು ಸೇರಿದ್ದಕ್ಕೆ ಪತ್ನಿ ಆತ್ಮಹತ್ಯೆ; ಸುದ್ದಿ ಕೇಳಿ ಪತಿ ಹೃದಯಾಘಾತಕ್ಕೆ ಬಲಿ..!

ಮೈಸೂರು; ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ಗಂಡ ಹಾಗೂ ಮಗ ಜೈಲು ಸೇರಿದ್ದರು. ಇದರಿಂದಾಗಿ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ಕೇಳುತ್ತಿದ್ದಂತೆ ಜೈಲಿನಲ್ಲಿದ್ದ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಈ ಘಟನೆ ನಡೆದಿದೆ.

ಸೋಮವಾರ ಮೈಸೂರಿನ ವಿದ್ಯಾನಗರದಲ್ಲಿ ಬಾಲರಾಜ್‌ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಮೃತ ಇಂದ್ರಾಣಿಯವರ ಪತಿ ಸಾಮ್ರಾಟ್‌ ಹಾಗೂ ಮಗ ತೇಜಸ್‌ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಪತಿ ಹಾಗೂ ಮಗ ಜೈಲು ಸೇರಿದ್ದರಿಂದ ಅವಮಾನ ಆಯಿತೆಂದು ಇಂದ್ರಾಣಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಜೈಲಿನಲ್ಲಿದ್ದ ಪತಿ ಸಾಮ್ರಾಟ್‌ಗೆ ತಿಳಿದಿದೆ. ಇದರಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅದೇ ದುಃಖದಲ್ಲಿ ಕುಸಿದುಬಿದ್ದಿದ್ದು, ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

Share Post