BengaluruCrime

ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿ ದಾರುಣ ಸಾವು!

ಆನೇಕಲ್; ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.  ಆನೇಕಲ್ ಸಮೀಪದ ಅರವಂಟಿಗೆಪುರ ರೈಲ್ವೆ ಗೇಟ್ ಈ ಘಟನೆ ನಡೆದಿದ್ದು, ಚಿತ್ರದುರ್ಗ ಮೂಲದ ರಾಮು ಎಂಬುವವರೇ ಸಾವನ್ನಪ್ಪಿರುವವರು.

ರಾಮು ಅವರು, ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಬ್ಬಕ್ಕೆಂದು ಅವರು ಸ್ನೇಹಿತರ ಮನೆಗೆ ಬಂದಿದ್ದರು. ರೈಲ್ವೆ ಹಳಿ ಸಮೀಪವೇ ನಿನ್ನೆ ಸಂಜೆ ಸ್ನೇಹಿತರ ಜೊತೆಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಅದೇ ಮತ್ತಿನಲ್ಲಿ ಅವರು ರೈಲು ಹಳ್ಳಿ ದಾಟಲು ಹೋಗಿದ್ದು, ಈ ವೇಳೆ ರೈಲು ಅವರಿಗೆ ಡಿಕ್ಕಿ ಹೊಡೆದಿದೆ.

ರೈಲು ಡಿಕ್ಕಿಯಾದ ರಭಸಕ್ಕೆ ರಾಮು ಅವರ ದೇಹ ಛಿದ್ರ ಛಿದ್ರವಾಗಿದೆ. ಮೃತ ದೇಹವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

Share Post