ದೇವರ ಸನ್ನಿಧಿಗೆ ಬಂದು ನೃತ್ಯ ಮಾಡಿ ಭಕ್ತಿ ಸಮರ್ಪಿಸಿದ ಕರಡಿ
ತುಮಕೂರು; ಕಾಡು ಪ್ರಾಣಿಗಳು ಮನುಷ್ಯನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ. ಇತ್ತೀಚಿನ ದಿನಗಳಲ್ಲಂತೂ ಪ್ರತಿ ನಿತ್ಯ ಒಂದಲ್ಲ ಒಂದು ಕಾಡು ಪ್ರಾಣಿಗಳ ಉಪಟಳ, ಮನುಷ್ಯನ ಮೇಲೆ ದಾಳಿ ಯಂತಹ ಘಟನೆಗಳು ನಡೆಯುತ್ತಲೇ ಇವೆ. ಆದ್ರೆ ನಾವು ಇಂದು ಹೇಳಹೊರಟಿರುವುದು ಕಾಡು ಪ್ರಾಣಿಯಲ್ಲಿರುವ ದೈವರಾಧನೆ ಗುಣದ ಬಗ್ಗೆ.
ಮನುಷ್ಯನಂತೆಯೇ ಪ್ರಾಣಿಗಳಿಗೂ ದೈವದ ಬಗ್ಗೆ ನಂಬಿಕೆ ಇದೆ, ಪ್ರಾಣಿಗಳು ಸಹ ತಮ್ಮದೇ ಆದ ರೀತಿಯಲ್ಲಿ ದೇವರನ್ನ ಆರಾಧಿಸುತ್ತವೆ ಎನ್ನಲಾಗುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ತುಮಕೂರಿನಲ್ಲಿ ಕರಡಿಯೊಂದು ದೇವಸ್ಥಾನಕ್ಕೆ ಬಂದು ವಿಶಿಷ್ಟ ರೀತಿಯಲ್ಲಿ ನಡೆದುಕೊಂಡಿದೆ. ಈ ದೃಷ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕುಣಿಗಲ್ ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿ ಬಳಿ ಒಡೆಬೈರವೇಶ್ವರ ದೇವಾಲಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಮುಂಜಾನೆ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಚಿಲಿ ಪಿಲಿ ಹಕ್ಕಿಗಳ ನಾದ ಕೇಳುತ್ತಿರುವಾಗಲೇ ಕರಡಿಯೊಂದು ದೇವಸ್ಥಾನಕ್ಕೆ ಆಗಮಿಸುತ್ತದೆ, ನೇರವಾಗಿ ದೇವರ ಗರ್ಭದ ಗುಡಿಯ ಮುಂದೆ ನಿಂತು ದೇವರ ಧರ್ಶನ ಮಾಡುತ್ತದೆ. ಬಳಿಕ ಹಕ್ಕಿ ಪಕ್ಷಿಗಳ ಶಬ್ಧದಂತೆ ತಾನು ಸಹ ಎದ್ದು ನಿಂತು ನೃತ್ಯ ಮಾಡುವ ರೀತಿಯಲ್ಲಿ ಕೂಗುತ್ತಾ, ತನ್ನ ಭಕ್ತಿಯನ್ನ ಅರ್ಪಿಸುವಂತಿದೆ.
ಕರಡಿಯನ್ನ ಕಂಡು ಕೆಲವರು ಆತಂಕ ವ್ಯಕ್ತ ಪಡಿಸಿದ್ರೆ, ಇನ್ನೂ ಕೆಲವರು ಕರಡಿಯಲ್ಲಿರುವ ದೈವ ಆರಾಧನೆಯ ಗುಣಗಳನ್ನ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.