CrimeNational

ವಿದ್ಯಾರ್ಥಿಯಿಂದ ಬೆಂಕಿ; ತೀವ್ರ ಗಾಯಗೊಂಡಿದ್ದ ಪ್ರಾಂಶುಪಾಲ ಸಾವು

ಇಂದೋರ್‌; ಮಧ್ಯಪ್ರದೇಶದ ಇಂದೋರ್‌ನಲ್ಲಿ ವಿದ್ಯಾರ್ಥಿಯೊಬ್ಬ ಖಾಸಗಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದರು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಫೆಬ್ರವರಿ 20ರಂದು ಪ್ರಾಂಶುಪಾಲರಾದ ವಿಮುಕ್ತಿ ಶರ್ಮಾ ಅವರು ಮನೆಗೆ ತೆರಳುತ್ತಿದ್ದರು. ಈ ವೇಳೆ ಅಂಕಪಟ್ಟಿ ನೀಡುವಲ್ಲಿ ಮಾಡಿದ್ದರ ವಿಚಾರವಾಗಿ ಆರೋಪಿ ವಾಗ್ವಾದ ನಡೆಸಿದ್ದ. ಇದೇ ವೇಳೆ ಆಕ್ರೋಶಗೊಂಡು ಪ್ರಾಂಶುಪಾಲರ ಮೇಲೆ ಪೆಟ್ರೋ ಸುರಿದು ಲೈಟರ್‌ನಿಂದ ಬೆಂಕಿ ಹಚ್ಚಿದ್ದ.

ಶೇಕಡಾ 80ರಷ್ಟು ಸುಟ್ಟು ಗಾಯಗೊಂಡಿದ್ದ ಪ್ರಾಂಶುಪಾಲರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಅಶುತೋಷ್‌ ಶ್ರೀವಾಸ್ತವ್‌ ಎಂದು ಗುರುತಿಸಲಾಗಿದೆ. ಬೆಂಕಿ ಹಚ್ಚಿದ ಆರೋಪಿ ವಿದ್ಯಾರ್ಥಿ ಅಶುತೋಷ್‌ 7 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣನಾಗಿದ್ದ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share Post