Districts

ಸಿಎಂ ತವರಲ್ಲಿ ಗೋಡೆ ಕುಸಿದು ಅವಾಂತರ; ಯುವಕ ಸಾವು

ಹಾವೇರಿ; ಕೆಲ ದಿನಗಳಿಂದ ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿಯ ಸಿಎಂ ತವರು ಹಾವೇರಿ ಜಿಲ್ಲೆಯಲ್ಲೂ ಮಳೆರಾಯ ಅವಾಂತರ ಸೃಷ್ಟಿಸಿದ್ದಾನೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ತಡರಾತ್ರಿ ಮನೆಗೋಡೆ ಕುಸಿದಿತ್ತು. ಇದರಡಿ ಸಿಲುಕಿ ಗಂಭೀರವಾಗಿ ಗಾಯಗೊ೦ಡಿದ್ದ ಯುವಕ ಇದೀಗ ಸಾವನ್ನಪ್ಪಿದ್ದಾನೆ.

ಮೃತ ಯುವಕನನ್ನು ಮುಸ್ತಾಕ್ ಯರಗುಪ್ಪಿ(27) ಎಂದು ಗುರುತಿಸಲಾಗಿದೆ. ಮನೆ ಶಿಥಿಲಗೊಂಡಿದ್ದರಿಂದ ಜಿಟಿ ಜಿಟಿ ಮಳೆಗೆ ನೆನೆದು, ಗೋಡೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ತಕ್ಷಣ ಮುಸ್ತಾಕ್‍ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮುಸ್ತಾಕ್ ಮೃತಪಟ್ಟಿದ್ದಾನೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share Post