ಉಡುಪಿಯಲ್ಲಿ ಮೀನಿನ ಸುಗ್ಗಿ; ಬಲೆಗೆ ಬಿದ್ದ ತೊರಕೆ ಮೀನು
ಉಡುಪಿ; ಉಡುಪಿಯ ಮೀನುಗಾರರಿಗೆ ಇಂದು ಸುಗ್ಗಿಯ ದಿನ. ಯಾಕಂದ್ರೆ ಇಂದು ಅವರ ಬಲೆಗೆ ಬೆಲೆಬಾಳುವ ತೊರಕೆ ಮೀನುಗಳು ಬಿದ್ದಿವೆ. ಕಳೆದ ವಾರ ಟನ್ಗಟ್ಟಲೆ ಬೂತಾಯಿ ಮೀನುಗಳು ಸಿಕ್ಕ ಬೆನ್ನಲ್ಲೇ ಕೈರಂಪಣಿ ಮೀನುಗಾರರ ಬಲೆಗೆ ಬೃಹದಾಕಾರದ ನೂರಾರು ತೊರಕೆ ಮೀನುಗಳು ಬಿದ್ದಿವೆ.
ಕಾಪು ಮೂಳೂರು ಕಡಲ ತೀರದಲ್ಲಿ ಬಲೆಗೆ ಬಿದ್ದ ದೊಡ್ಡ ದೊಡ್ಡ ತೊರಕೆ ಮೀನುಗಳು ಸುಮಾರು 50 ಕೆಜಿಯಷ್ಟು ತೂಕ ಹೊಂದಿವೆ. ತೊರಕೆ ಮೀನುಗಳನ್ನು ನೋಡಲು ನೂರಾರು ಮಂದಿ ನೆರೆದಿದ್ದರು. ಕೆಜಿಗೆ 250ರಿಂದ 300 ರೂಪಾಯಿಗಳಷ್ಟು ಬೆಲೆ ಈ ಮೀನುಗಳಿಗೆ ಇದೆ.