ಮಂಡ್ಯದಲ್ಲಿ ಭಾರಿ ಗಾಳಿ, ಮಳೆ; KSRTC ಬಸ್ ಜಸ್ಟ್ ಮಿಸ್
ಮಂಡ್ಯ; ಮಂಡ್ಯದಲ್ಲಿ ಭಾರಿ ಮಳೆಯಾಗಿದೆ. ಇದರ ಜೊತೆಗೆ ಭಾರೀ ಗಾಳಿ ಬೀಸಿದೆ. ಇದರಿಂದಾಗಿ ವಾಹನ ಸಂಚಾರ ಕೂಡಾ ತೊಂದರೆಯಾಗಿದೆ.
ಭಾರಿ ಗಾಳಿಯಿಂದಾಗಿ ಮಂಡ್ಯ ನಗರಕ್ಕೆ ಸ್ವಾಗತ ಕೋರುವ ಕಮಾನು ನೆಲಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕೆಎಸ್ ಆರ್ ಟಿಸಿ ಬಸ್ ಸ್ವಲ್ಪದರಲ್ಲಿ ಬಚಾವಾಗಿದೆ. ಬಸ್ ಮುಂದೆ ಹೋಗ್ತಿದ್ದಂತೆ ಪ್ರವೇಶದ ಮುಖ್ಯದ್ವಾರದ ಕಮಾನು ಬಿದ್ದಿದೆ.
ನಿನ್ನೆ ರಾತ್ರಿ ಮಂಡ್ಯ ಜಿಲ್ಲೆಯಲ್ಲಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ರೈತರಿಗೆ, ಜನಸಾಮಾನ್ಯರಿಗೆ ಹೊಸ ಹುಮ್ಮಸ್ಸು ಬಂದಿದೆ.