CrimeNational

ಅಪರಿಚಿತರಿಂದ ಗುಂಡಿನ ದಾಳಿ; ಯುವಕ ಸಾವು

ಮುಂಬೈ; ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ೨೬ ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮುಂಬೈನ ಉಪನಗರ ಕಾಂದಿವಲಿ ಬಳಿ ಈ ಕೃತ್ಯ ಎಸಗಲಾಗಿದೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಲಿಂಕ್ ರಸ್ತೆಯ ಲಾಲ್ಜಿಪಾಡಾದಲ್ಲಿ ನಡೆದಿದೆ. ಸಂತ್ರಸ್ತರು ಗುಂಪಿನಲ್ಲಿ ನಿಂತಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಅಂಕಿತ್‌ ಯಾದವ್‌ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಕೃಷ್ಣಾ ಜನ್ಮಾಷ್ಟಮಿ ವೇಳೆ ಮೃತ ವ್ಯಕ್ತಿ ಹಾಗೂ ದುಷ್ಕರ್ಮಿಗಳ ನಡುವೆ ಜಗಳ ನಡೆದಿತ್ತು.

Share Post