DistrictsPolitics

ಸಿದ್ದು & ಜಿಟಿಡಿ ಲವ್‌ ಬರ್ಡ್ಸ್‌; ಸಚಿವ ಎಸ್‌.ಟಿ.ಸೋಮಶೇಖರ್‌

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರು ಲವ್ ಬರ್ಡ್ಸ್ ಇದ್ದಂತೆ. ಯಾವಾಗ ಲವ್‌ ಆಗುತ್ತೆ, ಯಾವಾಗ ಡಿವೋರ್ಸ್‌ ತಗೋತಾರೆ ಅನ್ನೋದು ಅವರಿಗೇ ಗೊತ್ತು ಅಂತ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡರಿಗೆ ಯಾವಾಗ ಲವ್ ಆಗುತ್ತೆ, ಯಾವಾಗ ಡಿವೋರ್ಸ್ ಆಗುತ್ತೆ ಅನ್ನೋದು ಅವರಿಗೇ ಗೊತ್ತಾಗಬೇಕು ಎಂದರು. ಸಿದ್ದರಾಮಯ್ಯ ಅವರು ಸಿಎಂ ಆಗಲಿ ಅಂತ ಪೂಜೆ ಮಾಡಿಸಿದ್ರೆ ಅದು ನೆರವೇರಲಿಲ್ಲ. ಪೂಜೆ ಮಾಡಿ ಸಿಎಂ ಆಗೋದಾದರೆ ಎಲ್ಲರೂ ಪೂಜೆ ಮಾಡಿಸುತ್ತಿದ್ದರು ಎಂದು ಸೋಮಶೇಖರ್ ಗೇಲಿ ಮಾಡಿದರು.

Share Post