ನಾಳೆಯಿಂದ ಆಟೋ ಪ್ರಯಾಣ ದುಬಾರಿ; ಮಿನಿಮಮ್ ಚಾರ್ಜ್ 30 ರೂಪಾಯಿ..!
ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆಯಾಗಲಿದೆ. ಪೆಟ್ರೋಲ್ ಹಾಗೂ ಆಟೋ ಗ್ಯಾಸ್ ದರಿ ಏರಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆಟೋ ಕನಿಷ್ಠ ಪ್ರಯಾಣ ದರವನ್ನು 25 ರೂಪಾಯಿಯಿಂದ 30 ರೂಪಾಯಿಗೆ ಏರಿಸಿದೆ. ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ಆಗಲಿದೆ. ಈ ದರ ನಾಳೆಯಿಂದ ಬೆಂಗಳೂರಿನಲ್ಲಿ ಜಾರಿಯಾಗಲಿದೆ.
ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಕಳೆದ ಒಂದು ವರ್ಷದಿಂದ ಆಟೋ ಗ್ಯಾಸ್ ದರ ಹಾಗೂ ಪೆಟ್ರೋಲ್ ದರ ಏರಿಕೆಯಾಗುತ್ತಲೇ ಇತ್ತು. ಈ ಕಾರಣದಿಂದಾಗಿ ಆಟೋ ಪ್ರಯಾಣದ ಕನಿಷ್ಠ ದರವನ್ನು ಏರಿಕೆ ಮಾಡಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದರು.

ಆಟೋ ಚಾಲಕರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಕನಿಷ್ಠ ಆಟೋ ಪ್ರಯಾಣ ದರವನ್ನು 25 ರೂಪಾಯಿಯಿಂದ 30 ರೂಪಾಯಿಗೆ ಏರಿಸಿತ್ತು. ನಾಳೆಯಿಂದ ಹೊಸ ದರ ಜಾರಿಯಾಗಲಿದೆ.
