CrimeDistricts

ಜೈಲಿನಲ್ಲೇ ಬರ್ತ್‌ಡೇ ಆಚರಣೆ; ಸಾರ್ವಜನಿಕರ ಆಕ್ರೋಶ

ರಾಮನಗರ; ಜೈಲಿನಲ್ಲೇ ಖೈದಿಯೊಬ್ಬನಿಗೆ ಬರ್ತಡೇ ಅನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಜಿಲ್ಲಾ ಕಾರಗೃಹದಲ್ಲಿ ರೌಡಿಶೀಟರ್‌ ಕಿರಣ್‌ ಅಲಿಯಾಸ್‌ ತಮಟೆ ಎಂಬಾತ ಅದ್ದೂರಿ ಬರ್ತ್ ಡೇ ಆಚರಿಸಿಕೊಂಡಿದ್ದಾನೆ.

ಜೈಲಿನಲ್ಲಿ ಬರ್ತಡೇ ಆಚರಿಸಿಕೊಂಡಾಗ ತೆಗೆದ ಫೋಟೋಗಳನ್ನು ಇತರ ಖೈದಿಗಳು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಕೇಕ್ ಕತ್ತರಿಸಿ, ಹ್ಯಾಪಿ ಬರ್ತ್ ಡೇ ಕಿರಣ್ ಅಣ್ಣ ಎಂದು ಖೈದಿಗಳು ಹೂವಿನಲ್ಲಿ ಬರೆದಿದ್ದಾರೆ. ಖೈದಿಗಳ ಬರ್ತ್ ಡೇ ಸೆಲೆಬ್ರೇಷನ್ ಗೆ ಜೈಲು ಅಧಿಕಾರಿಗಳ‌ ಕೂಡಾ ಸಾಥ್ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Share Post