Districts

ಪಕ್ಕದ ಮನೆಯವನ ರುಂಡ ಕಡಿದ ಕಿರುತೆರೆ ಸಹ ಕಲಾವಿದ

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಶ್ರಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ರುಂಡ ಕತ್ತರಿಸಿದ ಆರೋಪದ ಮೇಲೆ ಕಿರುತೆರೆ ಕಲಾವಿದನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರಾವಣಗೆರೆ ಗ್ರಾಮದ ನಿವಾಸಿ ರಮೇಶ್‌ ಕೊಲೆಯಾದ ವ್ಯಕ್ತಿಯಾಗಿದ್ದು, ಕಿರುತೆರೆ ಸಹ ಕಲಾವಿದ ಶ್ರೀನಿವಾಸ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ.

ಕೊಲೆಯಾದ ರಮೇಶ್‌ ಹಾಗೂ ಆರೋಪಿ ಶ್ರೀನಿವಾಸ್‌ ಇಬ್ಬರು ಅಕ್ಕಪಕ್ಕದ ಮನೆಯವರು. ಇಬ್ಬರೂ ಬೆಂಗಳೂರಿನಲ್ಲಿ ವಾಸವಿದ್ದರು. ಯುಗಾದಿ ಹಬ್ಬದ ಕಾರಣದಿಂದ ಊರಿಗೆ ಹೋಗಿದ್ದರು. ರಮೇಶ್‌ ಬೇಸಿಗೆ ಸೆಕೆಯ ಕಾರಣದಿಂದ ಮನೆಯ ಬಾಗಿಲು ತೆರೆದೇ ಮಲಗಿದ್ದರು. ಮನೆ ಹೊರಗೆ ರಮೇಶ ಅವರ ತಂದೆಯೂ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿಯು ರಮೇಶ ಅವರ ತಲೆಯನ್ನು ಮಚ್ಚಿನಿಂದ ಕಡಿದಿದ್ದಾನೆ. ಯಾರಿಗೂ ಗೊತ್ತಾಗದಂತೆ ಜಮೀನಿಗೆ ಕೊಂಡೊದ್ದು ಹೂತು ಹಾಕಿದ್ದಾನೆ. ರಮೇಶ ಅವರ ತಂದೆಗೆ ನಸುಕಿನಲ್ಲಿ ಎಚ್ಚರವಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಗೆ ಹಳೆಯ ವೈಷಮ್ಯ ಅಥವಾ ವಾಮಾಚಾರ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿ ಶ್ರೀನಿವಾಸ್‌ ಕೊಲೆಗೆ ಕಾರಣ ಇನ್ನೂ ಬಾಯ್ಬಿಟ್ಟಿಲ್ಲ.

Share Post