Shivanna; ಗೀತಾ ಅವರು ಸಂಸದೆಯಾಗಬೇಕು ಎಂಬುದು ಆಸೆ; ಶಿವರಾಜ್ ಕುಮಾರ್
ಶಿವಮೊಗ್ಗ; ನನಗೆ ರಾಜಕೀಯಕ್ಕೆ ಬರುವ ಯಾವ ಆಸಕ್ತಿಯೂ ಇಲ್ಲ. ನಾನು ರಾಜಕ್ಕೆ ಬರೋದಿಲ್ಲ. ಚುನಾವಣೆಗೂ ನಿಲ್ಲೋದಿಲ್ಲ. ಆದ್ರೆ ನನ್ನ ಪತ್ನಿ ಗೀತಾ ಅವರು ಸಂಸದೆಯಾಗಬೇಕು, ಜನ ಸೇವೆ ಮಾಡಬೇಕು ಎಂಬ ಆಸೆ ನನಗಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ತಮ್ಮ ಪತ್ನಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಯಸುತ್ತಿರುವ ಬಗ್ಗೆ ಮಾತನಾಡಿದ್ದಾರೆ.
ಕಾಂಗ್ರೆಸ್ ಸೇರಿದ್ದ ಗೀತಾ ಶಿವರಾಜ್‌ಕುಮಾರ್;
ಕಾಂಗ್ರೆಸ್ ಸೇರಿದ್ದ ಗೀತಾ ಶಿವರಾಜ್‌ಕುಮಾರ್; ಗೀತಾ ಶಿವರಾಜ್‌ಕುಮಾರ್ ಅವರು ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿ.. ಅವರು 2018ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದ್ರೆ ಈ ಬಾರಿ ಅವರು, ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಸಹೋದರ ಮಧು ಬಂಗಾರಪ್ಪ ಅವರ ಪರವಾಗಿ ಗೀತಾ ಶಿವರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಇಬ್ಬರೂ ಪ್ರಚಾರ ಮಾಡಿದ್ದರು.. ಇದೀಗ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಬಯಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಶಿವಣ್ಣ;
ಶಿವಮೊಗ್ಗದಲ್ಲಿ ಮಾತನಾಡಿದ ಶಿವಣ್ಣ; ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಆದ್ರೆ ಅವರು ಪ್ರಚಾರ ಪಡೆದುಕೊಂಡಿಲ್ಲ ಅಷ್ಟೇ. ಬಂಗಾರ ಧಾಮದ ಮೂಲಕ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಮಹಿಳೆಯರ ಪರವಾಗಿ ದುಡಿಯುತ್ತಿದ್ದಾರೆ. ಅವರು ಸಂಸದೆಯಾಗಬೇಕು ಎಂಬುದು ನಮ್ಮೆಲ್ಲರ ಆಸೆ. ಆ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಅವರು ಸಂಸದೆಯಾಗಿ ಮಹಿಳೆಯರಿಗೆ ಮಾದರಿಯಾಗಲಿ ಎಂದು ಶಿವಣ್ಣ ಹೇಳಿದರು.
ಗೀತಾ ಶಿವರಾಜ್‌ಕುಮಾರ್ ಹೇಳಿದ್ದೇನು..?;
ಗೀತಾ ಶಿವರಾಜ್‌ಕುಮಾರ್ ಹೇಳಿದ್ದೇನು..?; ಶಿವಮೊಗ್ಗ ಸ್ಪರ್ಧೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿರುವ ಗೀತಾ ಶಿವರಾಜ್‌ಕುಮಾರ್, ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ‘ಬಂಗಾರ ಧಾಮ’ ಮೂಲಕ ನಾನು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇನೆ. ಅದನ್ನು ಮುಂದುವರೆಸುತ್ತೇನೆ. ಪಕ್ಷ ನನಗೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ರಾಜಕೀಯ ಕ್ಷೇತ್ರವನ್ನು ನಾನು ಸೇವಾ ಕ್ಷೇತ್ರವೆಂದು ಪರಿಗಣಿಸಿದ್ದೇನೆ ಎಂದು ಹೇಳಿದ್ದಾರೆ.