Murder; ಅಮೆರಿಕದಲ್ಲಿ ಭಾರತದ ಕೂಚಿಪುಡಿ ನೃತ್ಯಪಟು ಬರ್ಬರ ಹತ್ಯೆ!
ನವದೆಹಲಿ; ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿಗಳು ಮುಂದುವರೆಯುತ್ತಿವೆ. ಅದರಲ್ಲೂ ಕೂಡಾ ಭಾರತೀಯ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಹೀಗಿರುವಾಗಲೇ ಭಾರತೀಯ ಮೂಲದ ಡ್ಯಾನ್ಸರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ; ಬೇಸಿಗೆಯಲ್ಲಿ ನಿಮ್ಮ ಚರ್ಮ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?
ಕೂಚಿಪುಡಿ ನೃತ್ಯಪಟುವಿನ ಬರ್ಬರ ಹತ್ಯೆ;
ಕೂಚಿಪುಡಿ ನೃತ್ಯಪಟುವಿನ ಬರ್ಬರ ಹತ್ಯೆ; ಮಿಸ್ಸೌರಿ ಸೇಂಟ್ ಲೂಯಿಸ್ ಸಿಟಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಕೂಚಿಪುಡ ನೃತ್ಯಪಟುವಾಗಿದ್ದ ಭಾರತೀಯದ ಮೂಲದ ಅಮರನಾಥ್ ಘೋಷ್ ಕೊಲೆಯಾದವರು.. ಇದವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಕೊಲೆಗೆ ಕಾರಣ ಏನು ಅನ್ನೋದು ಇನ್ನೂ ಗೊತ್ತಿಲ್ಲ.
ಇದನ್ನೂ ಓದಿ; ಬೇಸಿಗೆಯಲ್ಲಿ ಇರುವೆಗಳ ಸಮಸ್ಯೆ; ನಿವಾರಣೆ ತುಂಬಾ ಸುಲಭ!
ಸಂಜೆ ವಾಕ್ ಮಾಡುತ್ತಿದ್ದಾಗ ನಡೆಯಿತು ದಾಳಿ;
ಸಂಜೆ ವಾಕ್ ಮಾಡುತ್ತಿದ್ದಾಗ ನಡೆಯಿತು ದಾಳಿ; ನೃತ್ಯಪಟು ಅಮರನಾಥ್ ಘೋಷ್ ಸೇಂಟ್ ಲೂಯಿಸ್ ಸಿಟಿಯಲ್ಲಿ ವಾಸಿಸುತ್ತಿದ್ದರು.. ಅವರು ಭರತನಾಟ್ಯ ಹಾಗೂ ಕೂಚಿಪುಡಿಯಲ್ಲಿ ಪರಿಣಿತರಾಗಿದ್ದರು. ವಾಷಿಂಗ್ಟನ್ ಯೂನಿವರ್ಸಿಯಲ್ಲಿ ಅವರು ಎಂಎಫ್‌ಎ ಡ್ಯಾನ್ಸ್ ಅಧ್ಯಯನ ಮಾಡುತ್ತಿದ್ದರು… ಫೆಬ್ರವರಿ 27ರಂದು ಸಂಜೆ ಅವರು ಎಂದಿನಂತೆ ವಾಕಿಂಗ್ ಮಾಡುತ್ತಿದ್ದರು. ರಸ್ತೆಯಲ್ಲಿ ವಾಕ್ ಮಾಡುತ್ತಿರುವಾಗ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ;Bomb blast case; ನಾಲ್ವರು ಶಂಕಿತರ ವಿಚಾರಣೆ; ಸಿಕ್ಕಿಬಿದ್ದರಾ ಸ್ಫೋಟ ಆರೋಪಿಗಳು..?
3 ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಅಮರನಾಥ್;
3 ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಅಮರನಾಥ್; ಕೂಚಿಪುಡಿ ನೃತ್ಯಪಟು ಅಮರನಾಥ್ ಘೋಷ್ ಅವರು ಕೋಲ್ಕತ್ತಾ ಮೂಲದವರು.. ಅವರು ಭರತನಾಟ್ಯ ಹಾಗೂ ಕೂಚಿಪುಡಿ ಎರಡೂ ನೃತ್ಯಗಳಲ್ಲೂ ಪರಿಣಿತರಾಗಿದ್ದರು.. ಆದ್ರೆ ಅವರಿಗೆ ಯಾರೂ ಇರಲಿಲ್ಲ.. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು.. ಮೂರು ತಿಂಗಳ ಹಿಂದಷ್ಟೇ ಅವರ ತಾಯಿಯೂ ಮೃತಪಟ್ಟಿದ್ದರು.. ಹೀಗಾಗಿ ಅಮರನಾಥ್ ಘೋಷ್‌ಗೆ ಸ್ನೇಹಿತರು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
ತನ್ನ ಪಾಡಿಗೆ ತಾವಿದ್ದ ಅಮರನಾಥ್ ಘೋಷ್;
ತನ್ನ ಪಾಡಿಗೆ ತಾವಿದ್ದ ಅಮರನಾಥ್ ಘೋಷ್; ಅಮರನಾಥ್ ಘೋಷ್ ಅವರು ತಾಯಿಯನ್ನು ಕಳೆದುಕೊಂಡ ಮೇಲೆ ಮೌನಕ್ಕೆ ಶರಣಾಗಿದ್ದರು.. ತಮ್ಮ ಪಾಡಿಗೆ ತಾವು ಓದು ಮುಂದುವರೆಸಿದ್ದರು.. ಆದ್ರೆ ಅವರು ತಮ್ಮ ಪಾಡಿಗೆ ತಾವು ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಸಾಯಿಸಿದ್ದಾರೆ. ಇದರಿಂದ ಅವರ ಸ್ನೇಹಿತರು ಆತಂಕಕ್ಕೊಳಗಾಗಿದ್ದಾರೆ. ಅಮರನಾಥ್ ಘೋಷ್ ಮೃತದೇಹವನ್ನು ಸ್ನೇಹಿತರ ಮನವಿ ಮೇರೆಗೆ ಹಸ್ತಾಂತರಿಸಲಾಗುತ್ತಿದೆ.
ಇದನ್ನೂ ಓದಿ; Rameshwaram cafe blast; ಬಾಂಬ್ ಸ್ಫೋಟ ಪ್ರಕರಣ; ಶಂಕಿತನ ಚಹರೆ ಪತ್ತೆ!
ಸೂಕ್ತ ತನಿಖೆಗೆ ಒತ್ತಾಯ ಮಾಡಿರುವ ಸ್ನೇಹಿತರು;
ಸೂಕ್ತ ತನಿಖೆಗೆ ಒತ್ತಾಯ ಮಾಡಿರುವ ಸ್ನೇಹಿತರು; ಘಟನೆಯಿಂದ ದಿಗ್ಬ್ರಾಂತರಾಗಿರುವ ಸ್ನೇಹಿತರು, ಕೊಲೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹ ಮಾಡಿದ್ದಾರೆ. ಅಮರನಾಥ್ ಘೋಷ್ ಸಾವಿಗೆ ನ್ಯಾಯ ಬೇಕೆಂದು ಅಭಿಯಾನ ಶುರು ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.