CrimeDistricts

ಆಟೋ ಚಾಲಕನನ್ನು ಮದುವೆಯಾಗಿದ್ದ ಯುವತಿ ಆತ್ಮಹತ್ಯೆ

ಮಂಗಳೂರು; ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾರೆ. ಸುರತ್ಕಲ್‌ನ ಬಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಿವ್ಯಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆಯಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.

ದಿವ್ಯಾ ಅವರು ಮೆಡಿಕಲ್‌ ಶಾಪ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಟೋ ಚಾಲಕನಾಗಿದ್ದ ಹರೀಶ್‌ರನ್ನು ಪ್ರೀತಿಸಿ ಮದುವೆಯಾಗಿದ್ದರು. ನೆರೆಮನೆಯವರ ಕಾರ್ಯಕ್ರಮವೊಂದಕ್ಕೆ ದಿವ್ಯಾ ಹಾಗೂ ಪತಿ ಹೋಗಿದ್ದರು. ಅನಂತರ ದಿವ್ಯಾ ಒಬ್ಬರೇ ಮನೆಗೆ ವಾಪಸ್ಸಾಗಿದ್ದರು. ಗಂಡ ತಡವಾಗಿ ಬಂದಿದ್ದು, ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

Share Post