ಡ್ರಗ್ ಮಿಶ್ರಿತ ಬಾಂಗ್ ಚಾಕ್ಲೆಟ್‌ಗಳ ಮಾರಾಟ; ಮಂಗಳೂರಲ್ಲಿ ಪೊಲೀಸರ ದಾಳಿ
ಮಂಗಳೂರು; ಡ್ರಗ್ಸ್ ಮಿಶ್ರಿತ ಚಾಕಲೇಟ್ ಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಕ್ವಿಂಟಾಲ್ ಗಟ್ಟಲೆ ಬಾಂಗ್ ಚಾಕ್ಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಉತ್ತರ ಪ್ರದೇಶ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45) ಹಾಗೂ ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ (49) ಬಂಧಿತರು. ಮಂಗಳೂರು ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಮಾದಕ ವಸ್ತು ಮಿಕ್ಸ್ ಮಾಡಿದ್ದ ಚಾಕೊಲೇಟ್‌ಗಳು ಸಿಕ್ಕಿವೆ ಎನ್ನಲಾಗಿದೆ.
ಮಹಾಶಕ್ತಿ ಮುನಕ್ಕಾ, ಬಮ್‍ಬಮ್ ಮುನೆಕ್ಕಾವಟಿ, ಪಾವರ್ ಮುನಕ್ಕಾವಟಿ ಹಾಗೂ ಆನಂದ ಚೂರ್ಣ ಎಂಬ ಹೆಸರುಗಳಲ್ಲಿ ಚಾಕೋಲೇಟ್‌ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಒಂದು ಚಾಕೋಲೇಟ್ ಬೆಲೆ ಮೂವತ್ತು ರೂಪಾಯಿಗೆ ಮಾರುತ್ತಿದ್ದರು ಎಂದು ತಿಳಿದುಬಂದಿದೆ.