BengaluruCinema

ಸ್ಟೋರಿ ಆಫ್‌ ಸೌಜನ್ಯ; ಚಲನಚಿತ್ರವಾಗುತ್ತಾ ಧರ್ಮಸ್ಥಳದ ರೇಪ್‌ ಅಂಡ್‌ ಮರ್ಡರ್‌ ಕೇಸ್‌

ಬೆಂಗಳೂರು; ಹತ್ತು ವರ್ಷಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಸೌಜನ್ಯ ಎಂಬ ವಿದ್ಯಾರ್ಥಿನಿ ರೇಪ್‌ ಅಂಡ್‌ ಮರ್ಡರ್‌ ಕೇಸ್‌ ಮತ್ತೆ ಮುಂಚೂಣಿಗೆ ಬಂದಿದೆ. ಸಂತೋಷ್‌ ರಾವ್‌ ನಿರ್ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದ ಮೇಲೆ ಆರೋಪಿಗಳು ಯಾರು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಈ ಪ್ರಕರಣವನ್ನು ಮರುವಿಚಾರಣೆ ನಡೆಸಬೇಕು ಎಂದು ಹೋರಾಟಗಳು ಶುರುವಾಗಿವೆ. ಹೀಗಿರುವಾಗಲೇ ಸೌಜನ್ಯ ಕೇಸ್‌ನ್ನು ಸಿನಿಮಾ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಸ್ಟೋರಿ ಆಫ್‌ ಸೌಜನ್ಯ ಟೈಟಲ್‌ಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಜಿ.ಕೆ.ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಸ್ಟೋರಿ ಆಫ್‌ ಸೌಜನ್ಯ ಟೈಟಲ್‌ ಕೋರಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಇದೊಂದು ಸಾಮಾಜಿಕ ಕಥಾ ಹಂದರ ಹೊಂದಿದೆ ಎಂದು ಬರೆಯಲಾಗಿದೆ.

Share Post