CrimeDistricts

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ; ಮೂವರು ಆರೋಪಿಗಳ ಅರೆಸ್ಟ್‌

ಹುಬ್ಬಳ್ಳಿ; 36 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಹುಬ್ಬಳ್ಳಿ ಕಸಬಾ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆ ಕೆಲಸಕ್ಕೆ ಫ್ಯಾಕ್ಟರಿಗೆ ತೆರಳುತ್ತಿದ್ದಾಗ ಮೂವರು ವ್ಯಕ್ತಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆ ಮೂವರನ್ನು ಬಂಧಿಸಲಾಗಿದೆ.

ಸ್ಥಳೀಯರೇ ಆಗಿರುವ ಉಲ್ಪಥ್‌ ನಾಮ್‌, ಮಲಿಕ್‌ ಹಾಗೂ ಮುಬಾರಕ್‌ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಹಳೇ ಹುಬ್ಬಳ್ಳಿ ವ್ಯಾಪ್ತಿಯ ಇಂದಿರಾನಗರದ ಮಹಿಳೆ, ಉದ್ಯಮ ನಗರದ ಫ್ಯಾಕ್ಟರಿ ಕೆಲಸಕ್ಕೆ ತೆರಳುತ್ತಿದ್ದಾಗ ಆರೋಪಿಗಳು ಹಿಂಬಾಲಿಸಿಕೊಂಡು ಬಂದಿದ್ದರು. ಅದರಲ್ಲಿ ಒಬ್ಬ ವ್ಯಕ್ತಿ ಬಲವಂತವಾಗಿ ಮಹಿಳೆಯ ಬಾಯಿ ಮುಚ್ಚಿ, ಬಯಲು ಜಾಗಕ್ಕೆ ಎಳೆದೊಯ್ದಿದ್ದಾನೆ. ಕಿರುಚಾಡಿದರೆ ಸಾಯಿಸುತ್ತೇವೆ ಎಂದು ಇನ್ನಿಬ್ಬರು ಆರೋಪಿಗಳು ಚಾಕು ತೋರಿಸಿದ್ದಾರೆ. ಆದ್ರೆ ಮಹಿಳೆ ಕಿರುಚಾಡಿದ್ದು, ಫ್ಯಾಕ್ಟರಿ ಕೆಲಸಗಾರರು ಅಲ್ಲಿಗೆ ಓಡಿಬಂದಿದ್ದಾರೆ. ಅದನ್ನು ನೋಡಿ ಆರೋಪಿಗಳ ಪರಾರಿಯಾಗಿದ್ದರು.

Share Post