CrimeInternational

ಶಾಲಾ ಬಸ್ ಗೆ ಬೆಂಕಿ; 25 ವಿದ್ಯಾರ್ಥಿಗಳಿಗೆ ಗಾಯ!

ಥಾಯ್ಲೆಂಡ್‌; ಶಾಲಾ ಮಕ್ಕಳನ್ನು ಕರೆದೊಯುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 25 ಮಂದಿ ಸಜೀವ ದಹನವಾಗಿದ್ದಾರೆ..  ಥೈಲ್ಯಾಂಡ್ ನ ಬ್ಯಾಂಕಾಕ್‌ನ ಪಥುಮ್ ಥಾನಿ ಪ್ರಾಂತ್ಯದಲ್ಲಿ ಈ ದುರಂತ ನಡೆದಿದೆ..

   ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಪ್ರವಾಸ ಹೋಗುವಾಗ ಈ ಘಟನೆ ನಡೆದಿದೆ.. ಬಸ್ ನಲ್ಲಿ ವಿದ್ಯಾರ್ಥಿಗಳು ಸೇರಿ 44 ಮಂದಿ ಇದ್ದರು. ಇದರಲ್ಲಿ 25 ಮಂದಿ ಬಸ್ ನಲ್ಲೆ ಸಾವನ್ನಪ್ಪಿದ್ದಾರೆ..

 ಟೈಯರ್ ಸ್ಪೋಟಗೊಂಡು ಬಸ್ ತಡೆಬೇಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

Share Post