Districts

ಯಾವುದೇ ಕಾರಣಕ್ಕೂ ಬಂದ್‌ ಮಾಡಬೇಡಿ

ಬೆಳಗಾವಿ: ಎಂಇಎಸ್‌ ಪುಂಡರ ಹಾವಳಿ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ. ೩೧ ರಂದು ಬಂದ್‌ ಗೆ ವಾಟಳ್‌ ನಾಗರಾಜು ಕರೆ ನೀಡಿದ್ದಾರೆ. ಈ ಕುರಿತು ಕಂದಾಯ ಸಚಿವ ಆರ್‌. ಅಶೋಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಂದ್‌ ಮಾಡಬೇಡಿ ಎಂದು ಆರ್.‌ ಅಶೋಕ್‌ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತವಾಡಿದ ಅವರು, ಈಗಾಗಲೇ ಕೊರೋನಾ ಸಮಯದಲ್ಲಿ ಜನರಿಗೆ ಬಂದ್‌ ಬಿಸಿ ತಟ್ಟಿದೆ. ಈಗ ಮತ್ತೆ ಬಂದ್‌ ನಿಂದಾಗಿ ಜನ ಸಮಸ್ಯೆ ಅನುಭವಿಸಬೇಕಾಗುತ್ತೆ. ಎಂಇಎಸ್‌ ಒಂದು ಪಕ್ಷ ಆಗಿರೋದರಿಂದ ಅದನ್ನು ಕಾನೂನು ರೀತಿಯಲ್ಲಿ ಬ್ಯಾನ್‌ ಮಾಡಬೇಕು ಆ ಬಗ್ಗೆ ಈಗಾಗಲೇ ಚರ್ಚೆ ಸಹ ನಡೆದಿದೆ. ಬಂದ್‌ ಮಾಡುವವರಿಗೆ ನನ್ನದೊಂದು ಮನವಿ ಯಾವುದೇ ಕಾರಣಕ್ಕೂ ಬಂದ್‌ ಮಾಡಬೇಡಿ ಎಂದರು. ೩೧ ರಂದು ಬಂದ್‌ ಗೆ ಈಗಾಗಲೇ ಹಲವು ಸಂಘಟನೆಗಳು ಸಾಥ್‌ ನೀಡಿದ್ದಾರೆ.

 

Share Post