CrimeNational

ಅಪಹರಣಕಾರರಿಂದ ತಪ್ಪಿಸಿಕೊಂಡ ಯುವತಿಯ ಸಾಹಸಗಾಥೆ

ಹರಿಯಾಣ: ಹಾಡಹಗಲೇ ಯುವತಿಯನ್ನು ಅಪಹರಣ ಮಾಡಲು ಯತ್ನಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಈ ದರ್ಘಟನೆಯನ್ನು ಯುವತಿ ಟ್ವೀಟ್‌ ಮಾಡಿದ್ದು, ತಾನು ಬಚಾವಾಗಿದ್ದೇ ಒಂದು ದೊಡ್ಡ ಸಾಹಸ ಎಂದಿದ್ದಾಳೆ. ಮಾರುಕಟ್ಟೆಯಿಂದ ಮನೆಗೆ ತೆರಳಲು ಯುವತಿ ಆಟೋ ಹಿಡಿದಿದ್ದಾಳೆ. ಮನೆಗೆ ಹೋಗುವಾಗ ಆ ದಾರಿ ಬಿಟ್ಟು ಆಟೋ ಡ್ರೈವರ್‌ ಬೇರೆ ದಾರಿ ಹಿಡಿದಿದ್ದಾನೆ.

ಇದು ನಮ್ಮನೆ ದಾರಿ ಅಲ್ಲ, ಎಲ್ಲಿಗೆ ಹೋಗ್ತಿದ್ದೀರಿ ಎಂದು ಕೂಗಿದರೂ ಕೇಳಿಸಿಕೊಳ್ಳದೆ ಆಟೋ ಚಲಾವಣೆ ಮಾಡ್ತಿದ್ದ. ಹಿಂದೆಯಿಂದ ಬೆನ್ನಿಗೆ ಹತ್ತು ಬಾರಿ ಹೊಡೆದರೂ ಯಾವುದೇ ಪ್ರತಿಕ್ರಿಯೆ ನೀಡದೆ ಬಹಳ ವೃಗವಾಗಿ ಆಟೋ ಚಲಾಯಿಸುತ್ತಿದ್ದನಂತೆ. ಬೇರೆ ದಾರಿ ಕಾಣದೆ ನಾನು ಆಟೋದಿಂದ ಜಿಗಿದು ಬಚಾವಾದೆ ಎಂದು ಯುವತಿ ತನ್ನ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾಳೆ.

ಇನ್ನು ಆ ಗಡಿಬಿಡಿಯಲ್ಲಿ ರಕ್ಷಾ ನಂಬರ್‌ ನೋಟ್‌ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಕೂಡಲೇ ಹತ್ತಿರದ ಪೊಲೀಸ್‌ ಠಾನೆಗೆ ತೆರಳಿ ದೂರು ದಾಖಲಿಸದ್ದೇನೆ. ಪೊಲೀಸರು ಆತನನ್ನು ಟ್ರೇಸ್‌ ಮಾಡುವುದಾಗಿ ತಿಳಿಸಿದ್ದಾರೆ. ಹೆಣ್ಣು ಮಕ್ಕಳು ಜಾಗೃತವಾಗಿರಿ ಎಂದು ತಿಳಿಸಿದ್ದರು.

Share Post