ಈ ಸಾವು ನ್ಯಾಯವೇ..? ಒಲಿವರ್ಗೆ ಏನಾಯ್ತು?
ಮಂಗಳೂರು: ಹಣದ ಆಸೆಗಾಗಿ ಮನುಷ್ಯ ಪ್ರಾಣಿಗಳನ್ನು ಸಾಯಿಸಿ ಅವುಗಳಿಂದ ದೊರೆಯಬಹುದಾದ ಎಲ್ಲಾ ಅಂಗಾಂಗಳನ್ನು ಕಿತ್ತು ಮಾರುತ್ತಾನೆ. ಇದರ ವಿರುದ್ಧ ಪ್ರಾಣಿ ದಯಾ ಸಂಘ ಸದಾ ಧ್ವನಿ ಎತ್ತುತ್ತದೆ. ಪ್ರಾಣಿಗಳ ರಕ್ಷಣೆಗಾಗಿ ಸರ್ಕಾರ ಕೂಡ ಕೆಲವು ಕಾನೂನುಗಳನ್ನು ರೂಪಿಸಿ ಅವುಗಳ ಸಂತತಿ ನಾಶವಾಗದಂತೆ ನೋಡಿಕೊಳ್ಳಲು ಉದ್ಯಾನವನಗಳನ್ನು ಮಾಡಿ ಅಲ್ಲಿ ಅಪರೂಪದ ಪ್ರಾಣಿಗಳನ್ನು ಸಾಕಲಾಗುತ್ತದೆ. ಅಲ್ಲಿ ಪ್ರಾಣಿಗಳಿಗೆ ಅಗತ್ಯವಾದ ಆಹಾರ ನೀರು ಸೌಕರ್ಗಳಿಂದ ಹಿಡಿದು ಎಲ್ಲವೂ ಲಭ್ಯವಿರುತ್ತದೆ ಆದರೂ ಕೆಲವೊಮ್ಮೆ ಪ್ರಾಣಿಗಳು ಸಾವನ್ನಪ್ಪುವುದು ಆಶ್ಚರ್ಯವಾಗಿರುತ್ತವೆ. ಮನುಷ್ಯರಾದ್ರೆ ಹಾರ್ಟ್ ಅಟ್ಯಾಕ್ ಅಥವಾ ಮತ್ತೆ ಬೇರೆ ರೋಗಗಳಿಂದ ಸಾವನ್ನಪ್ಪಿದ್ದಾರೆ ಎನ್ನಬಹುದು. ಆದ್ರೆ ಆರೋಗ್ಯವಾಗಿ ಬಹಳ ದಷ್ಟ-ಪುಷ್ಟವಾಗಿ ಇರುವ ಪ್ರಾಣಿಗಳು ಇದ್ದಕ್ಕಿದ್ದಂತೆ ಸತ್ತರೆ ಅವುಗಳ ಸಾವು ಪ್ರಶ್ನಾತೀತವಾಗಿರುತ್ತವೆ.
ಹೌದು ಮಂಗಳೂರಿನಲ್ಲಿರುವ ಪಿಲಿಕುಳ ಉದ್ಯಾನವದಲ್ಲಿ ಒಂಭತ್ತು ವರ್ಷದ ಒಲಿವರ್ ಎಂಬ ಹುಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ. ಇಂದು ಬೆಳ್ಳಂಬೆಳಗ್ಗೆ ನಿಂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ಮಾಹಿತಿ ಇದೆ. ಹುಲಿಗೆ ಯಾವುದೇ ಖಾಯಿಲೆ ಇರಲಿಲ್ಲನಾರೋಗ್ಯವಾಗಿತ್ತು ಎಂಬ ಮಾಹಿತಿಯನ್ನು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿ ಸಾವಿಗೆ ಕಾರಣ ತಿಳಿಯಲು ಅದರ ಅಂಗಾಂಗ ಮಾದರಿಯನ್ನು ಲ್ಯಾಬ್ಗೆ ಕಳಿಸಲಾಗಿದೆ. ಬೆಂಗಳೂರು, ಭೋಪಾಲ್ ಲ್ಯಾಬ್ಗೆ ಹುಲಿ ಅಂಗಾಂಗ ಮಾದರಿ ರವಾನೆ ಮಾಡಲಾಗಿದ್ದು, ಅದರ ವರದಿ ಬಂದ ಬಳಿಕವಷ್ಟೇ ಹುಲಿ ಸಾವಿಗೆ ಕಾರಣ ತಿಳಿಯಲಿದೆ. ಹುಲಿ ಸಾವನ್ನಪ್ಪಿರುವ ಕಾರಣ ಉದ್ಯಾನವನದ ಪ್ರತಿ ಬ್ಯಾರಕ್ಗೆ ರೋಗ ನಿರೋಧಕ ದ್ರಾವಣ ಸಿಂಪಡಣೆ ಮಾಡಿದ್ದಾರೆ.