ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಎನ್ ಐ ಎ ಇಂದ ಚಾರ್ಜ್ ಶೀಟ್ ಸಲ್ಲಿಕೆ
ಮಂಗಳೂರು; ಬೆಳ್ಲಾರೆಯಲ್ಲಿ ಬಿಜೆಪಿ ಯುವ ಮೋರ್ಚಾದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ ಐ ಎ ಇಂದು 20 ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದೆ.ಬೆಂಗಳೂರಿನ ಎನ್ ಐ ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿ ಹಲವು ಸ್ಪೋಟಕ ಮಾಹಿತಿಗಳನ್ನ ಎನ್ ಐ ಎ ಉಲ್ಲೇಖ ಮಾಡಿದೆ.ಪಿಎಫ್ ಐ ಕರಾಳ ಮುಖವನ್ನ ತೆರದಿಟ್ಟಿರುವ ಎನ್ ಐ ಎ 27 July 2022 ರಂದು ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು.
2047 ಕ್ಕೆ ಮುಸ್ಲಿಂ ಆಡಳಿತ ಜಾರಿಗೆ ತರವು ಉದ್ದೇಶ ಹೊಂದಿದ್ದ ಪಿಎಫ್ ಐ ಸಮಾಜದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನ ನಡೆಸುತ್ತಿತ್ತು.
ಪಿಎಫ್ ಐ ನ ಪ್ರಮುಖ ನಾಯಕರು ಸಭೆ ನಡೆಸಿ ಯಾರನ್ನ ಕೊಲೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಿದ್ದೆಂತೆ.ಇದಕ್ಕಾಗಿ ಕಿಲ್ಲಿಂಗ್ ಸ್ಕ್ವಾಡ್ಸ್ ನ್ನ ಮಾಡಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದರು.
ಆದರಂತೆ ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಆರೋಪಿಗಳು ಬೆಂಗಳೂರು, ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ಸಭೆಗಳನ್ನ ಮಾಡಿದ್ದರಂತೆ.ಈ ಕೇಸ್ ಗೆ ಸಂಭಂದಿಸಿಸ ಇನ್ನೂ ಆರು ಆರೋಪಿಗಳು ತಲೆ ಮರೆಸಿಕೊಂಡಿದ್ದು
ಅವರಿಗಾಗಿ ಎನ್ ಐ ಎ ಹುಡುಕಾಟ ನಡೆಸುತ್ತಿದೆ.
ಇನ್ನು ಸರ್ವೀಸ್ ಟೀಮ್ ಅಥವಾ ಕಿಲ್ಲರ್ಸ್ ಸ್ಕ್ಯಾಡ್ ಕಾರ್ಯಾಚರಣೆಯೆ ಭಯಾನಕಗಿದೆ
ಪಿಎಫ್ ಐ ನ ಇಸ್ಲಾಮಿಕ್ ಆಡಳಿತವನ್ನ ಜಾರಿಗೆ ತರಲು ಅಡ್ಡಿಯಾಗುವ ವ್ಯಕ್ತಿಗಳನ್ನ ಶತ್ರುಗಳು ಎಂದು ಗುರ್ತಿಸಲಾಗ್ತಾ ಇತ್ತು,ಇಂತಹವರನ್ನ ಕೊಲೆ ಮಾಡುವ ಕೆಲಸವನ್ನ ಈ ಸರ್ವೀಸ್ ಟೀಮ್ ಅಥವಾ ಕಿಲ್ಲಿಂಗ್ ಸ್ಕ್ವಾಡ್ ಮಾಡುತ್ತಿತ್ತು ಈ ಕಿಲ್ಲಿಂಗ್ ಸ್ಕ್ವಾಡ್ ಗೆ ಶಸ್ತ್ರಾಸ್ತ್ರ ನೀಡಿ ತರಬೇತಿ ನೀಡಲಾಗುತ್ತಿತ್ತು.ಕೊಲೆ ಹೇಗೆ ಮಾಡಬೇಕು ಪುನಃ ಹೇಗೆ ತಪ್ಪಿಸಿಕೊಳ್ಳಬೇಕು ಎಲ್ಲದರ ಬಗ್ಗೆಯೂ ತರಬೇತಿ ನೀಡಲಾಗುತ್ತಿತ್ತು
ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನ ಗುರ್ತಿಸಿ ಕೊಲೆ ಮಾಡಿದ ಬಳಿಕ ಅಷ್ಟೇ ಸುಲಭವಾಗಿ ಎಸ್ಕೇಪ್ ಆಗುವ ತರಬೇತಿಯನ್ನ ಕಿಲ್ಲಿಂಗ್ ಸ್ಕ್ವಾಡ್ ಪಡೆದುಕೊಂಡಿತ್ತು ಎಂದು ಎನ್ ಐ ಎ ಅಧಿಕಾರಿಗಳು ತಿಳೊಸಿದ್ದಾರೆ.