BengaluruCrime

ಖೋಟಾನೋಟು ಮುದ್ರಿಸುತ್ತಿದ್ದ ಮೂವರ ಅರೆಸ್ಟ್

ಚಿಕ್ಕಬಳ್ಳಾಫುರ : ಖೋಟಾ ನೋಟು ಮುದ್ರಿಸುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನ ಬಂದಿಸಿದ್ದಾರೆ.
ಚಿಂತಾಮಣಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್.ನಾಗೇಶ ಊಲವಾಡಿ ಬಳಿ ಪಾಳು ಬಿಟ್ಟ ಕಟ್ಟಡದಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ರು. ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಎಎಸ್ಪಿ ಕುಶಲ್ ಚೌಕ್ಸೆ ಹಾಗೂ ತಂಡ ಕಾರ್ಯಾಚರಣೆ ನಡೆಸಿದ್ದಾರೆ, ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಇನ್ನೂ ಮೂವರು ಆರೋಪಿಗಳ ಎಸ್ಕೇಪ್ ಆಗಿದ್ದಾದ್ದಾರೆ.
ಬಂಧಿತರಿಂದ ಪ್ರೀಂಟರ್ ಕಂ ಝರಾಕ್ಸ್ ಯಂತ್ರ, ಒಂದು ಕಲರ್ ಪ್ರೀಂಟರ್, ಲ್ಯಾಮಿನೇಟರ್ ಯಂತ್ರ, 1 ಲ್ಯಾಪ್ ಟಾಪ್ ಸೇರಿದಂತೆ ಖೋಟಾ ನೋಟುಗಳ ಜಪ್ತಿ. ಒಟ್ಟು 1 ಕೋಟಿ 29 ಸಾವಿರ ರೂಪಾಯಿಯ ಖೋಟಾ ನೋಟುಗಳು ಜಪ್ತಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share Post