CrimeDistricts

ಕಾವೇರಿ ಗ್ರಾಮೀಣ ಬ್ಯಾಂಕ್‌ ಮ್ಯಾನೇಜರ್‌ ನೇಣಿಗೆ ಶರಣು

ಮಂಡ್ಯ; ಮಂಡ್ಯ ಕಾವೇರಿ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ಕಚೇರಿಯ ಮ್ಯಾನೇಜರ್‌ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯದ ವಿನಾಯಕನಗರದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. 

ಕೊಳ್ಳೇಗಾಲ ಮೂಲದ ಮಲ್ಲಪ್ಪ ಎಂಬುವವರ ಪುತ್ರಿ ಶೃತಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಇನ್ನೂ ಮದುವೆಯಾಗಿರಲಿಲ್ಲ. ವಿನಾಯನಗರ ಬಡಾವಣೆಯಲ್ಲಿ ಒಬ್ಬರೇ ಬಾಡಿಗೆ ಮನೆಯಲ್ಲಿದ್ದರು. ಕಳೆದ ರಾತ್ರಿ ತಂದೆಗೆ ಕರೆ ಮಾಡಿದ್ದ ಶೃತಿ, ನಾನು ಬಾರದ ಲೋಕಕ್ಕೆ ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಕರೆ ಕಟ್‌ ಮಾಡಿದ್ದರು. ಇದರಿಂದ ತಂದೆ ಮಲ್ಲಪ್ಪ ಆತಂಕಗೊಂಡಿದ್ದರು. ಕೂಡಲೇ ಮಂಡ್ಯದಲ್ಲಿದ್ದ ಸಂಬಂಧಿಕರಿಗೆ ಕರೆ ಮಾಡಿ, ಶೃತಿ ಮನೆ ಬಳಿ ಹೋಗುವಂತೆ ಹೇಳಿದ್ದರು. ಆದ್ರೆ ಸಂಬಂಧಿಕರು ಬರುವಷ್ಟರಲ್ಲಿ ಶೃತಿ ನೇಣಿಗೆ ಕೊರಳೊಡ್ಡಿದ್ದಳು.

ಅಂದಹಾಗೆ ಶೃತಿ ಏಳು ವರ್ಷದಿಂದ ಕಾವೇರಿ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕಿಯಾಗಿ ನೇಮಕಗೊಂಡಿದ್ದಳು. ಮೊದಲಿಗೆ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶೃತಿ ಇತ್ತೀಚೆಗಷ್ಟೇ ಮಂಡ್ಯಕ್ಕೆ ವರ್ಗಾವಣೆಯಾಗಿ ಬಂದಿದ್ದಳು.

ಪ್ರತಿಭಾವಂತೆಯಾಗಿದ್ದ ಶೃತಿ ಐಎಎಸ್‌ ಮಾಡುವ ಕನಸು ಕಟ್ಟಿಕೊಂಡಿದ್ದಳು. ಆದ್ರೆ ಅದು ನನಸಾಗೇ ಉಳಿದಿತ್ತು. ಇದರಿಂದ ಶೃತಿ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

 

Share Post