BengaluruCrime

ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ; 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆ, ಮಾಸ್ಟರ್‌ ಮೈಂಡ್‌ ಅರೆಸ್ಟ್‌!

ಬೆಂಗಳೂರು; ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಅಕ್ರಮ ನಡೆದಿದ್ದು, ಈ ಪ್ರಕರಣದಲ್ಲಿ ಸಚಿವ ನಾಗೇಂದ್ರರ ತಲೆದಂಡವಾಗಿದೆ.. ಇನ್ನು ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ವೇಳೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.. ವಾಲ್ಮೀಕಿ ನಿಗಮದಿಂದ ವರ್ಗಾವಣೆಯಾದ ಹಣವೆಲ್ಲವೂ ನಕಲಿ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ.. ಅದರ ಮಾಸ್ಟರ್‌ ಮೈಂಡ್‌ ಈಗ ಅರೆಸ್ಟ್‌ ಆಗಿದ್ದಾನೆ..

ಹೈದರಾಬಾದ್‌ನಲ್ಲಿ ಸತ್ಯನಾರಾಯಣ ವರ್ಮಾ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ.. ಈತ ಹಲವಾರು ಕಂಪನಿಗಳ ಹೆಸರಿನಲ್ಲಿ 18ಕ್ಕೂ ಹೆಚ್ಚು ನಕಲಿ ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದ ಎಂದು ತಿಳಿದುಬಂದಿದೆ.. ಈ ಖಾತೆಗಳಿಗೆ ಕೋಟಿ ಕೋಟಿ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.. ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಪೊಲೀಸರು 16 ಕೆಜಿ ಚಿನ್ನ ಹಾಗೂ 10 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ..

18 ಬ್ಯಾಂಕ್‌ ಖಾತೆಗಳಿಗೆ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿತ್ತು.. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ಎಲ್ಲಾ 18 ಬ್ಯಾಂಕ್‌ ಖಾತೆಗಳು ಕೂಡಾ ನಕಲಿ ಎಂದು ಗೊತ್ತಾಗಿತ್ತು.. ಅದರ ಜಾಡು ಹಿಡಿದು ಹೋದಾಗ ಹೈದರಾಬಾದ್‌ನಲ್ಲಿ ಸತ್ಯನಾರಾಯಣ ವರ್ಮಾ ಎಂಬಾತ ಸಿಕ್ಕಿಬಿದ್ದಿದ್ದಾನೆ..

ಆರೋಪಿ ಸತ್ಯನಾರಾಯಣ ವರ್ಮಾನೇ ವಿವಿಧ ಕಂಪನಿಗಳ ಹೆಸರಿನಲ್ಲಿ 18 ಬ್ಯಾಂಕ್ ಖಾತೆ ತೆರೆದಿದ್ದ.. ನಕಲಿ ಖಾತೆ ತೆರೆದಿದ್ದ ಆರೋಪಿಯನ್ನು SIT ಅಧಿಕಾರಿಗಳು ಬಂಧಿಸಿದ್ದಾರೆ.

 

Share Post