DistrictsNational

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; ಆರು ಕಾರ್ಮಿಕರು ದುರ್ಮರಣ

ಒಡಿಶಾ; ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದರು. ಈ ಕಹಿ ಘಟನೆ ಮರೆಯುವ ಮುನ್ನವೇ ಅದೇ ಒಡಿಶಾದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಜಾಜ್‌ಪುರ ರಸ್ತೆ ರೈಲು ನಿಲ್ದಾಣದಲ್ಲಿ ಗೂಡ್ಸ್‌ ರೈಲು ಹರಿದು ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಗೂಡ್ಸ್ ರೈಲಿನ ಅನುಪಯುಕ್ತ ಬೋಗಿ ಕೆಳಗೆ ಸಿಕ್ಕಿ ಆರು ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.  ಇಂಜಿನ್ ಇಲ್ಲದ ಗೂಡ್ಸ್ ರೈಲು ಕೆಲಕಾಲ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ. ಕಾರ್ಮಿಕರು ರೈಲ್ವೇ ರಿಪೇರಿ ಮಾಡುತ್ತಿದ್ದಾಗ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಕೂಡಲೇ ಕಾರ್ಮಿಕರು ಗೂಡ್ಸ್ ಬೋಗಿಯ ಕೆಳಗೆ ಹೋಗಿದ್ದಾರೆ. ಗಾಳಿಯ ರಭಸಕ್ಕೆ ಬೋಗಿಗಳು ಮುಂದಕ್ಕೆ ಚಲಿಸಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಆರಂಭದಲ್ಲಿ ಮಳೆಯಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಯಿತು. ಮತ್ತೊಂದೆಡೆ, ಬಾಲಸೋರ್ ರೈಲು ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Share Post