HealthNational

ವಡೋದರಾದಲ್ಲಿ ದೋಣಿ ದುರಂತ; 14 ಶಾಲಾ ಮಕ್ಕಳ ದುರ್ಮರಣ

ವಡೋದರಾ: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ದುರ‌ಂತ ನಡೆದಿದೆ. ಗುಜರಾತ್‌ನ ವಡೋದರಾದ ಹರ್ನಿ ಕೆರೆಯಲ್ಲಿ ಈ ದುರಂತ ನಡೆದಿದ್ದು,14 ಮಕ್ಕಳು ಸಾವನ್ನಪ್ಪಿದ್ದಾರೆ.

27 ಶಾಲಾ ಮಕ್ಕಳು ಪ್ರವಾಸಕ್ಕೆಂದು ಬಂದಿದ್ದರು. ಎಲ್ಲರೂ ಹರ್ನಿ ಕೆರೆಯಲ್ಲಿ ದೋಣಿ ವಿಹಾರ ಮಾಡುತ್ತಿದ್ದರು.ಮಾರ್ಗ ಮಧ್ಯೆ ದೋಣಿ ಅಪಾಯಕ್ಕೆ ಗುರಿಯಾಗಿ‌ ಮಗುಚಿಬಿದ್ದಿದೆ.. ಇದುವರೆಗೂ 14 ಶಾಲಾ ಮಕ್ಕಳ ಶವವನ್ನು ಹೊರಗೆ ತೆಗೆಯಲಾಗಿದೆ. ಉಳಿದ ಮಕ್ಕಳನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಶಾಲಾ ಮಕ್ಕಳ ಸ್ಥಿತಿಯು ಗಂಭೀರವಾಗಿದೆ.

Share Post