CrimeDistricts

ಮೈಸೂರು: ಆಸ್ತಿಗಾಗಿ ಸತ್ತ ವ್ಯಕ್ತಿಯ ಹೆಬ್ಬೆಟ್ಟು ಒತ್ತಿಸಿಕೊಂಡರು..!

ಮೈಸೂರು: ಕೋಟ್ಯಾಂತರ ರೂಪಾಯಿ ಆಸ್ತಿ ಕಬಳಿಸಲು ಸತ್ತ ವೃದ್ಧೆಯಿಂದ ಬಾಂಡ್ ಪೇಪರ್ ಮೇಲೆ ಸಂಬಂಧಿಕರು ಹೆಬ್ಬೆಟ್ಟು ಒತ್ತಿಸಿಕೊಂಡಿರುವ ಹೀನ ಕೃತ್ಯ ಮೈಸೂರಿನಲ್ಲಿ ನಡೆದಿದೆ. ಈ ವಿಡಿಯೋ ಈಗ ಬಹಿರಂಗವಾಗಿದೆ.  ಮಾಧ್ಯಮಗಳಲ್ಲಿ ಈ ಸ್ಟೋರಿ ವರದಿಯಾದ ಮೇಲೆ ಪೋಲಿಸರು ವೃದ್ಧೆಯ ಮನೆಗೆ ಹೋಗಿ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದ್ದಾರೆ.

ಮೈಸೂರಿನ ಶ್ರೀರಾಮಪುರ ಬಡಾವಣೆಯ ವಾಸಿ ಜಯಮ್ಮಳಿಗೆ 63 ವರ್ಷ ವಯಸ್ಸು. ಮದುವೆಯಾದ ಹೊಸದರಲ್ಲೆ ಜಯಮ್ಮ ಪತಿಯಿಂದ ದೂರವಿದ್ದರು. ಜಯಮ್ಮಳಿಗೆ ಮಕ್ಕಳು ಕೂಡ ಇರಲಿಲ್ಲ. ಆದರೆ ತವರು ಮನೆಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ 14 ಎಕರೆ ಜಮೀನು ಬಂದಿತ್ತು. 

ವಯೋ ಸಹಜ ಖಾಯಿಲೆಯಿಂದ ಜಯಮ್ಮ ಮೃತರಾದರು. ಜಯಮ್ಮ ಸಾಯುತ್ತಿದ್ದಂತೆ ಸಂಬಂಧಿಕರು ಈಕೆಯ ಮನೆಗೆ ಲಗ್ಗೆ ಇಟ್ಟರು. ಜಯಮ್ಮನ ಇಬ್ಬರು ಅಕ್ಕಂದಿರು ಹಾಗೂ ಒಬ್ಬ ತಮ್ಮ ಇದ್ದಾನೆ. ಈಗ ಇವರು ಜಯಮ್ಮನ ಆಸ್ತಿ ಕಬಳಿಸಲು ಸತ್ತ ಮೇಲೆ ಬಂದರು. ಜಯಮ್ಮನ ಅಕ್ಕನ ಮಗ ಸತ್ತು ಮಲಗಿದ್ದ ಸೋದರತ್ತೆಯಿಂದ ಬಾಂಡ್ ಪೇಪರ್ ಗೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾನೆ.

ಇದು ಜಯಮ್ಮನ ಅಕ್ಕಂದಿರು ಹಾಗೂ ಅವರ ಮಕ್ಕಳನ್ನು ಆಕ್ರೋಶಗೊಳಿಸಿತು. ಜಯಮ್ಮನ ಶವ ಒಂದು ಕಡೆ ಇದ್ದರೆ, ಮತ್ತೊಂದೆಡೆ ಆಕೆಯ ಸಂಬಂಧಿಕರು ಆಸ್ತಿಗಾಗಿ ಕಚ್ಚಾಡುತ್ತಿದ್ದರು. ಬಾಂಡ್ ಪೇಪರ್ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡ ಮೇಲೆ ಶವಸಂಸ್ಕಾರ ಕೂಡ ಮಾಡಿದ್ರು. ಆದರೆ ಹೆಬ್ಬೆಟ್ಟು ಒತ್ತಿಸಿಕೊಂಡ ವಿಡಿಯೋ ಬಹಿರಂಗವಾದ ಮೇಲೆ  ಪೋಲಿಸರು ಜಯಮ್ಮನ ಮನೆಗೆ ಹೋಗಿ ಸಂಬಂಧಿಕರನ್ನು ವಿಚಾರಣಗೊಳಪಡಿಸಿದ್ದಾರೆ.

Share Post