ಆಕ್ಸಿಜನ್ ಬಂದ್ ಮಾಡಿದ ಸಿಬ್ಬಂದಿ : ನರಳಿ ನರಳಿ ಸತ್ತ ವೃದ್ಧೆ
ಚಿಕ್ಕಬಳ್ಳಾಪುರ: ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಅಳವಡಿಸಿದ್ದ ಆಕ್ಸಿಜನ್ ಬಂದ್ ಮಾಡಿದ್ದರಿಂದ ಮಹಿಳೆ ನರಳ ನರಳಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಇಲ್ಲಿನ ಉಪ್ಪುಕುಂಟಪಲ್ಲಿ ಗ್ರಾಮದ ೭೦ ವರ್ಷದ ಮಹಿಳೆ ಗಂಗುಲಮ್ಮ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅವರಿ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿತ್ತು. ಆದರೆ, ಆಸ್ಪತ್ರೆ ಸಿಬ್ಬಂದಿಯೊಬ್ಬರು, ಆಕ್ಸಿಜನ್ ಸರಬರಾಜು ನಿಲ್ಲಿಸಿದ್ದಾರೆ. ಇದರಿಂದ ಗಂಗುಲಮ್ಮ ನರಳಿ ನರಳಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮೃತಳ ಸಂಬಂದಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.