Districts

ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ : ರಾಮನಗರ ಎಸ್‌ ಪಿ ಎಚ್ಚರಿಕೆ

ರಾಮನಗರ : ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಿಹಿಸಿ ಕಾಂಗ್ರೆಸ್‌ನವರು ನಾಳೆಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈಗ ವೀಕೆಂಡ್‌ ಲಾಕ್‌ಡೌನ್‌ ಚಾಲ್ತಿಯಲ್ಲಿರುವ ಕಾರಣ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಾಮನಗರದ ಎಸ್.ಪಿ ಗಿರೀಶ್‌ ಹೇಳಿದ್ದಾರೆ.

ಎಸ್.ಪಿ. ಗಿರೀಶ್‌ ಅವರು ಸುದ್ದಿಗಾರರೊಂದಿಗೆ ಮರಳೆ ಗ್ರಾಮದಲ್ಲಿ ಮಾತನಾಡಿ, ಈಗಾಗಲೇ ಡಿಕೆಶಿ ಅವರಿಗೆ ಪಾದಯಾತ್ರೆಗೆ ಅನುಮತಿ ನೀಡಲು ಆಗಲ್ಲ ಎಂದು ಹೇಳಿ ನೋಟೀಸ್‌ ನೀಡಲಾಗಿದೆ. ಈ ಸಂದರ್ಭದಲ್ಲಿ ಪಾದಯಾತ್ರೆ ಮಾಡುವುದು ತಪ್ಪು ಎಂದು ನಾನು ಕೇಳಿಕೊಳ್ಳುತ್ತೇನೆ. ಸಾಕಷ್ಟು ಬಾರಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ನಿಯಮ ಉಲ್ಲಂಗಿಸಿ ಪಾದಯಾತ್ರೆ ಮಾಡಿದರೆ ನಾವು ಅನಿವಾರ್ಯವಾಗಿ ಕಾನೂನು ಕ್ರಮಗಳನ್ನು ಜರುಗಿಸಲೇ ಬೇಕಾಗುತ್ತದೆ ಎಂದು ಎಸ್.ಪಿ ಗಿರೀಶ್‌ ಹೇಳಿದ್ದಾರೆ.

ಸಿದ್ಧರಾಮಯ್ಯ ಮತ್ತು ಡಿಕೆಶಿ ಅವರು ಯಾವುದೇ ಕಾರಣಕ್ಕೂ ನಾವು ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ನಾವು ಮೇಕೆದಾಟು ಆಂದೋಲನ ನಡೆಸುತ್ತೇವೆ. ಒಂದು ವೇಳೆ ಸೆಕ್ಷನ್‌ 144 ಜಾರಿ ಮಾಡಿದರೆ ನಾನು ಮತ್ತು ಡಿಕೆಶಿ ಆದರೂ ಪಾದಯಾತ್ರೆ ಮಾಡ್ತೀವಿ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

 

Share Post