Districts

ಸವದತ್ತಿ ದೇಗುಲ ಹುಂಡಿಯಲ್ಲಿ 1.30 ಕೋ ಟಿ ರೂ. ಸಂಗ್ರಹ

ಬೆಳಗಾವಿ: ಸವದತ್ತಿ ಯಲ್ಲಮ್ಮ ದೇಗುಲದ ಹುಂಡಿ ಎಣಿಕೆ ನಡೆಯುತ್ತಿದ್ದು, ಈ ಬಾರಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ನಾಲ್ಕು ದಿನಗಳ ಎಣಿಕೆ ಕಾರ್ಯದಲ್ಲಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 1.30 ಕೋಟಿ ರೂ. ಸಂಗ್ರಹವಾಗಿದೆ ಎಂದು ಯಲ್ಲಮ್ಮಾ ದೇವಸ್ಥಾನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ. 

  ಇನ್ನು 12. 45 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 3.08 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಇದರ ಜೊತೆಗೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಬೇಕೆಂದು ಪತ್ರಗಳನ್ನು ಬರೆದು ಹುಂಡಿಗೆ ಹಾಕಿದ್ದಾರೆ. ಅದರಲ್ಲಿ ಕೆಲವು ಪತ್ರಗಳು ಕುತೂಹಲಕ್ಕೆ ಕಾರಣವಾಗಿವೆ.

ನನ್ನ ಮಗಳಿಗೆ ನಮಗಿಂತ ನೂರು ಪಟ್ಟು ಆಸ್ತಿ ಇರುವ ವರನನ್ನು ಕರುಣಿಸು ಎಂದು ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. ಇನ್ನೊಬ್ಬರು ತನಗೆ ಪಿಎಸ್‌ಐ ಹುದ್ದೆ ಬರುವಂತೆ ಕರುಣಿಸು ಎಂದು ಬೇಡಿಕೊಂಡಿದ್ದಾರೆ.

Share Post