Districts

ಒಂದೇ ತಿಂಗಳಲ್ಲಿ 230 ಕೆಜಿ ಹೆಚ್ಚಿಸಿಕೊಂಡ ಅಭಿಮನ್ಯು; ದಸರಾ ಆನೆಗಳ ತೂಕ ಎಷ್ಟಿದೆ ಗೊತ್ತಾ..?

ಮೈಸೂರು; ದಸರಾ ಹಿನ್ನೆಲೆಯಲ್ಲಿ ಅರಮನೆಗೆ ಬಂದಿರುವ ಆನೆಗಳ ತೂಕ ಪರೀಕ್ಷೆ ಮಾಡಲಾಯಿತು. ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌’ನಲ್ಲಿ ಇಂದು ಬೆಳಗ್ಗೆ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 14 ಆನೆಗಳ ತೂಕ ಪರೀಕ್ಷೆ ನಡೆಯಿತು. ಅಭಿಮನ್ಯು 5000 ಕೆ.ಜಿ ಭಾರವಿದ್ದು, ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿದೆ. ಕಳೆದ ತಿಂಗಳು ನಡೆದಿದ್ದ ತೂಕ ಪರೀಕ್ಷೆಯಲ್ಲಿ 4,770 ಕೆಜಿ ಭಾರವಿದ್ದ ಅಭಿಮನ್ಯು ಒಂದೇ ತಿಂಗಳಲ್ಲಿ 230 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

63 ವರ್ಷ ವಯಸ್ಸಿನ ಅರ್ಜುನ 5950 ಕೆ.ಜಿ ತೂಗಿದರೆ, ಗೋಪಾಲಸ್ವಾಮಿ 5,460 ಕೆಜಿ, ಧನಂಜಯ 4890 ಕೆಜಿ ಭಾರವಿದ್ದವು. ಈ ಎರಡೂ ಆನೆಗಳು 2017ರ ನಂತರ ದಸರೆಗೆ ಬಂದಿರುವ ‘ಭೀಮ’ ಎಲ್ಲ ಆನೆಗಳಿಗಿಂತ ಬರೋಬ್ಬರಿ 425 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ತಿಂಗಳ ತೂಕ ಪರೀಕ್ಷೆಯಲ್ಲಿ 3,950 ಕೆ.ಜಿ ಭಾರವಿದ್ದ ಭೀಮ 4,345 ಕೆ.ಜಿ ತೂಗಿದನು. ‘ಮಹೇಂದ್ರ’ 4,450 ಕೆ.ಜಿ ತೂಗಿದ್ದು, 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಹೆಣ್ಣಾನೆಗಳಲ್ಲಿ ‘ಕಾವೇರಿ’ 3,245, ‘ಚೈತ್ರಾ’ 3,235 ಹಾಗೂ ‘ಲಕ್ಷ್ಮಿ’ 3,150 ಕೆ.ಜಿ ತೂಕವಿದ್ದರು. ಎರಡನೇ ತಂಡ ಆನೆಗಳಾದ ಶ್ರೀರಾಮ 4475, ಸುಗ್ರೀವ 4,785, ಗೋಪಿ 4,460 , ಪಾರ್ಥಸಾರಥಿ 3,445 ಹಾಗೂ ಹೆಣ್ಣಾನೆ ವಿಜಯಾ 2,760 ಕೆ.ಜಿ ತೂಗಿದರು.

Share Post