Districts

ತುಮಕೂರಿನಲ್ಲಿ ನೈತಿಕ ಪೊಲೀಸ್‌ ಗಿರಿ: ದೂರು ದಾಖಲು

ತುಮಕೂರು: ರಾಜ್ಯದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಹೆಚ್ಚಾಗ್ತಿವೆ. ಕೇವಲ ಮಂಗಳೂರಿನಲ್ಲಿ ಮಾತ್ರ ಬೆಳಕಿಗೆ ಬರುತ್ತಿದ್ದ ಪ್ರಕರಣಗಳು ಈಗ ಎಲ್ಲೆಂದರಲ್ಲಿ ಇಂತಹ ಘಟನೆಗಳು ಕಂಡುಬರುತ್ತವೆ. ವ್ಯಕ್ತಿ ತಪ್ಪು ಮಾಡಿದ್ರೆ ಅವರನ್ನು ಪೊಲೀಸರಿಗೆ ಒಪ್ಪಿಸುವುದು ನಿಯಮ. ಆದರೆ ಶಕ್ತಿ ಇದೆ ಅಂತ ಕಾನೂನನ್ನು ಕೈಗೆ ತೆಗದುಕೊಂಡು ಇಷ್ಟ ಬಂದಂತೆ ವರ್ತಿಸುವ ಜನರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ.

ತೆಂಗಿನಕಾಯಿ ಕದ್ದಿದ್ದಾನೆ ಅಂತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಕಟ್ಟಿಗೆಯಿಂದ ಹೊಡೆದು ಅಮಾನುಷವಾಗಿ ವರ್ತಿಸಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ. ತೋಟದ ಮಾಲೀಕ ರಾಜು ಎಂಬ ವ್ಯಕ್ತಿ ಹರೀಶ್‌ ಎಂಬುವವರನ್ನು ಮನಸೋ ಇಚ್ಛೆ ತಿಳಿಸಿದ್ದಾರೆ. ಥಳಿತಕ್ಕೆ ಹರೀಶ್‌ ಗಾಯಗೊಂಡಿದ್ದಾರೆ. ಡಿಸೆಂಬರ್‌ 18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ತೆಂಗಿನಕಾಯಿ ಕದ್ದಿದ್ದಕ್ಕೆ ಹೀಗೆ ಮಾಡಿದ್ರೆ ಚಿನ್ನ, ಹಣ ಕದಿಯುವವರಿಗೆ ಇನ್ನೆಂಥಾ ಶಿಕ್ಷೆ ಕೊಡಬೇಕು ಅಂತಿದಾರೆ ಗ್ರಾಮಸ್ಥರು.

ರಾಜು ವರ್ತನೆಗೆ ಬೇಸತ್ತು ಹರೀಶ್‌ ತಂದೆ ಗಂಗಾಧರಯ್ಯ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post