CrimeDistricts

ಶಿವಮೊಗ್ಗದಲ್ಲಿ ED ಅಧಿಕಾರಿಗಳ ದಾಳಿ; ನ್ಯಾಷನಲ್‌ ಸಂಸ್ಥೆಗಳ ಆಸ್ತಿಗಳ ಪರಿಶೀಲನೆ

ಶಿವಮೊಗ್ಗ; ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯ ಸುಲೈಮಾನ್‌ ಎಂಬುವವರಿಗೆ ಸೇರಿದ ನ್ಯಾಷನಲ್‌ ಸಂಸ್ಥೆಯ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ನ್ಯಾಷನಲ್‌ ಸಂಸ್ಥೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ನೆರವೇರಿಸಿತ್ತು.

ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ಅವರ ತೀರ್ಥಹಳ್ಳಿ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣ, ಶಿವಮೊಗ್ಗ ನಗರ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಯನ್ನು ಸಹಾ ಇದೇ ಸಂಸ್ಥೆ ಮಾಡುತ್ತಿದೆ. ಇದಲ್ಲದೆ ಶಿವಮೊಗ್ಗ ನಗರದಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗಳನ್ನು ನಡೆಸಿದೆ.

ಇದಲ್ಲದೆ ರಾಜ್ಯದ ಹಲವು ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳನ್ನು ಕೂಡಾ ನಡೆಸಿದೆ. ಆದ್ರೆ ಹಣದ ವಿಚಾರದಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

 

Share Post