ಮೀನುಗಾರರನ್ನು ತಲೆಕೆಳಗಾಗಿ ಕ್ರೇನ್‌ಗೆ ಕಟ್ಟಿ ಕಿರುಕುಳ
ಮಂಗಳೂರು : ನಗರದ ಹಳೆಯ ಬಂದರು ದಕ್ಕೇಯಲ್ಲಿ ಮೀನುಗಾರನಿಗೆ ಸಹ ಕಾರ್ಮಿಕರು ಕಿರುಕುಳ ನೀಡಿದ್ದಾರೆ. ಬೋಟ್‌ನ ಕ್ರೇನ್‌ಗೆ ತಲೆ ಕೆಳಗಾಗಿ ಕಟ್ಟಿ ದೌರ್ಜನ್ಯ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಬೆಸ್ತ ಸಮುದಾಯದ ವೈಲ ಶೀನು ದೌರ್ಜನ್ಯಕ್ಕರ ಒಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನನ್ನು ಹಿಂಸಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಮೊಬೈಲ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಈ ರೀತಿ ಹಿಂಸಿಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದಿದೆ. ಈ ಕೃತ್ಯ ಎಸಗಿದ ಆರೋಪಿಗಳು ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Mangaluru Fisherman