CrimeDistricts

ಮಹಿಳೆಗೆ ಚಾಕುವಿನಿಂದ ಇರಿದು ಆಕೆ ಮಗಳನ್ನು ಹೊತ್ತೊಯ್ದ ಆರೋಪಿ

ಧಾರವಾಡ; ಪೋಕ್ಸೋ ಕೇಸ್‌ನಲ್ಲಿ ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕೇಸ್ ದಾಖಲಿಸಿದ್ದ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ. ಸಾಲದೆಂಬಂತೆ ಆಕೆಯ ಅಪ್ರಾಪ್ತ ಮಗಳನ್ನು ಹೊತ್ತೊಯ್ದಿದ್ದಾನೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಶುರಾಮ್ ಲಮಾಣಿ ಕಳೆದ ವರ್ಷ ಪೋಕ್ಸೋ ಕೇಸ್‌ನಲ್ಲಿ ಜೈಲು ಸೇರಿದ್ದ. ಏಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಆತ ಹೊರ ಬಂದಿದ್ದ. ಶುಕ್ರವಾರ ರಾತ್ರಿ ಪರಶುರಾಮ್ ತನ್ನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಜೀಜಾಬಾಯಿಗೆ ಚಾಕುವಿನಿಂದ ಇರಿದಿದ್ದಾನೆ.

ಕಳೆದ ವರ್ಷ ಪರಶುರಾಮ್ ಜೀಜಾಬಾಯಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಹೀಗಾಗಿ ಜೀಜಾಬಾಯಿ ಪರಶುರಾಮ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದರು. ಈ ಸೇಡನ್ನು ತೀರಿಸಿಕೊಳ್ಳಲು ಪರಶುರಾಮ್ ಮಹಿಳೆ ಮನೆಗೆ ಹೋಗಿದ್ದು, ಕೃತ್ಯ ಎಸಗಿ ಮಗಳನ್ನೂ ಕರೆದುಕೊಂಡು ಪರಾರಿಯಾಗಿದ್ದಾನೆ.
ಪರಶುರಾಮ್ ಹಾಗೂ ಜೀಜಾಬಾಯಿ ಮಗಳ ನಡುವೆ ಪ್ರೇಮವಿತ್ತು. ಮಗಳು ಅಪ್ರಾಪ್ತೆ ಇದ್ದ ಕಾರಣ ಆಕೆಯ ರಕ್ಷಣೆಗೆ ಜೀಜಾಬಾಯಿ ನಿಂತಿದ್ದರು. ಆದರೆ ಜೀಜಾಬಾಯಿಗೆ ಚಾಕು ಇರಿಯಲು ಪರಶುರಾಮ್‌ಗೆ ಮಗಳೂ ಸಾಥ್‌ ನೀಡಿದ್ದಳು ಎಂಬುದು ತಿಳಿದುಬಂದಿದೆ.
Share Post