BengaluruCrime

ಬೆಂಗಳೂರಿನಲ್ಲಿ ಡ್ರಗ್ಸ್‌ ಪಾರ್ಟಿ; ಬಾಲಿವುಡ್‌ ನಟ ಸಿದ್ಧಾಂತ್‌ ಕಪೂರ್‌ ಅರೆಸ್ಟ್‌

ಬೆಂಗಳೂರು: ಡ್ರಗ್ಸ್‌ ಸೇವನೆ ಆರೋಪದಲ್ಲಿ ಬಾಲಿವುಡ್‌ ನಟ ಶಕ್ತಿ ಕಪೂರ್‌ ಅವರ ಮಗ, ನಟ ಸಿದ್ದಾಂತ್‌ ಕಪೂರ್‌ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಎಂ.ಜಿ.ರಸ್ತೆ ಟ್ರಿನಿಟಿ ವೃತ್ತದ ಸಮೀಪ ಇರುವ ದಿ ಪಾರ್ಕ್‌ ಹೋಟೆಲ್‌ನಲ್ಲಿ ಹಲಸೂರು ಪೊಲೀಸರು ತಡರಾತ್ರಿ ದಾಳಿ ನಡೆಸಿದ್ದು, ನಟ ಸಿದ್ಧಾಂತ್‌ ಸೇರಿ ಐವರನ್ನು ಬಂಧಿಸಲಾಗಿದೆ.

ಹೋಟೆಲ್‌ನಲ್ಲಿ ಪಾರ್ಟಿ ನಡೆಯುತ್ತಿದ್ದು, ಮಹಿಳೆಯರು, ಪುರುಷರು ಸೇರಿ 35 ಮಂದಿ ಪಾಲ್ಗೊಂಡಿದ್ದರು. ಈ ಪಾರ್ಟಿಯಲ್ಲಿ ಡ್ರಗ್ಸ್‌ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಯಿತು. ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಬಾಲಿವುಡ್‌ ನಟ ಸಿದ್ದಾಂತ್‌ ಕಪೂರ್ ಸೇರಿ ಐವರ ವೈದ್ಯಕೀಯ ವರದಿ ಬಂದಿದ್ದು, ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ. ಅವರನ್ನು ವಶಕ್ಕೆ‌ ಪಡೆಯಲಾಗಿದೆ. ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾರ್ಟಿಯ ಡಿಜೆ ಅನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅವರು ಮುಂಬೈ ಮೂಲದವರು ಎಂದು ಹೇಳಲಾಗುತ್ತಿದೆ.

Share Post