ಹೆಂಡತಿ ಮೋಜಿಗಾಗಿ ಬೈಕ್ ಕದಿಯುತ್ತಿದ್ದ ಆರೋಪಿ ಅರೆಸ್ಟ್
ಥಾಣೆ: ನವ ವಿವಾಹಿತನೊಬ್ಬ ತನ್ನ ಹೆಂಡತಿಗಾಗಿ ಬೈಕ್ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಥಾಣೆಯ ಮಂಪಡದ ದೀಪಕ್ ಸಲ್ಗಾರೆ ಎಂಬಾತನೇ ಪೊಲೀಸರ ಅತಿಥಿಯಾಗಿರುವ ವ್ಯಕ್ತಿ. ಇತ್ತೀಚೆಗೆ ಮದುವೆಯಾಗಿದ್ದ ಈತನಿಗೆ ಸರಿಯಾದ ಕೆಲಸವಿರಲಿಲ್ಲ. ಹೀಗಾಗಿ ಹೆಂಡತಿಯನ್ನು ಹೊರಗೆ ಕರೆದುಕೊಂಡು ಖರ್ಚಿಗೆ ಹಣವಿಲ್ಲವೆಂದು ದೀಪಕ್, ಬೈಕ್ಗಳನ್ನು ಕದ್ದು ಮಾರುವುದಕ್ಕೆ ಶುರು ಮಾಡಿದ್ದ. ಇದೀಗ ದೀಪಕ್ ಸಿಕ್ಕಿಬಿದ್ದಿದ್ದು, ಆತನಿಂದ ೫ ಲಕ್ಷ ರೂಪಾಯಿ ಮೌಲ್ಯದ 17 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಲ ದಿನಗಳಿಂದ ಮಂಪಡ ಗ್ರಾಮದ ಸುತ್ತಮುತ್ತ ಬೈಕ್ಗಳು ಕಳುವಾಗುತ್ತಿದ್ದವು. ಈ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಕಳ್ಳರನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನೇ ರೂಪಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆಗಿಳಿಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಕ್ಗೆ ಸಹಕಾರ ನೀಡುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.