ಮೆಡಿಕಲ್ ಸ್ಟೋರ್ ಮುಂದೆಯೇ ಕುಸಿದುಬಿದ್ದು ವ್ಯಕ್ತಿ ಸಾವು!
ಮೈಸೂರು; ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿ ಕೊಳ್ಳಲು ಮೆಡಿಕಲ್ ಸ್ಟೋರ್‌ಗೆ ಬಂದಿದ್ದ ವ್ಯಕ್ತಿ ಅಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಮೈಸೂರಿನ ಉದಯಗಿರಿಯ ಮೆಡಿಕಲ್ ಸ್ಟೋರ್ ಒಂದರ ಮುಂದೆ ಈ ಘಟನೆ ನಡೆದಿದೆ.
ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ ಎಂಬುವವರೇ ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ. 38 ವರ್ಷ ವಯಸ್ಸಿನ ಜಗದೀಶ್‌ಗೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಎದೆ ಹಿಡಿದುಕೊಂಡೇ ಅವರು ಮೆಡಿಕಲ್ ಸ್ಟೋರ್‌ಗೆ ಬಂದಿದ್ದಾರೆ. ಮೆಡಿಕಲ್ ಸ್ಟೋರ್‌ನಲ್ಲಿ ಎದೆನೋವಿಗೆ ಔಷಧಿ ಕೇಳಿದ್ದಾರೆ. ಅದೇ ಸಮಯದಲ್ಲೇ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ.
ಮೆಡಿಕಲ್ ಶಾಪ್‌ನವರು ಕೂಡಲೇ ಬಂದು ಜಗದೀಶ್‌ರನ್ನು ಮೇಲೆತ್ತಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಅವರ ಪ್ರಾಣ ಹೋಗಿದೆ. ಕೂಡಲೇ ಉದಯಗಿರಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.