CrimeDistricts

ಪೊಲೀಸ್ ವಶದಲ್ಲಿದ್ದ ಆದಿಲ್ ಸಾವು; ಠಾಣೆ ಮೇಲೆ ಕಲ್ಲು ತೂರಾಟ

ದಾವಣಗೆರೆ; ಪೊಲೀಸ್ ವಶದಲ್ಲಿದ್ದ ಆರೋಪಿ ಸಾವಿನ‌‌‌ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಂಬಂಧಿಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಚೆನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿದ್ದು, 11 ಪೊಲೀಸರಿಗೆ ಗಾಯಗಳಾಗಿವೆ.. ಹತ್ತು ಪೊಲೀಸ್ ವ್ಯಾನ್ ಗಳು ಜಖಂಗೊಂಡಿವೆ..

   ಮಟ್ಕಾ ಆಡಿಸುತ್ತಿದ್ದನಬ ಆರೋಪದ ಮೇಲೆ ಫಲೀಸರು ಆದಿಲ್ ಎಂಬಾತನನ್ನು ಬಂಧಿಸಿದ್ದರು.. ನಿನ್ನೆ ಆತನನ್ನು ಠಾಣೆಗೆ ಕರೆದುಕೊಂಡು ಬರಲಾಗಿತ್ತು.. ಈ ವೇಳೆ ಆದಿಲ್ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ.. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.. ಆದ್ರೆ ಆಸ್ಪತ್ರೆಯಲ್ಲಿ ಆದಿಲ್ ಸಾವನ್ನಪ್ಪಿದ್ದಾನೆ..

   ಆದಿಲ್ ಲಾಕಪ್ ಡೆತ್ ಆಗಿದೆ.. ಪೊಲೀಸರೇ ಸಾಯಿಸಿದ್ದಾರೆ ಎಂದು ಸಂಬಂಧಿಕರ ಆರೋಪ.. ಆದಿಲ್ ಸಾವಿನ ಸುದ್ದಿ ಕೇಳಿ ನೂರಾರು ಜನರು ಕಲ್ಲುಗಳಿಂದ ದಾಳಿ ಮಾಡಿದ್ದಾರೆ..

  ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಉಮಾ ಪ್ರಶಾಂತ ಮಾತನಾಡಿ, ಮೃತ ಆದಿಲ್​ನನ್ನು​ ಶುಕ್ರವಾರ ಪೊಲೀಸರು ಠಾಣೆಗೆ ಕರೆತಂದರು.ಮೃತ ಆದಿಲ್​ ಪೊಲೀಸ್ ಠಾಣೆಯಲ್ಲಿ 6-7 ನಿಮಿಷ ಕೂಡ ಇಲ್ಲ. ಠಾಣೆಗೆ ಬರುತ್ತಿದ್ದಂತೆ ಕುಸಿದುಬಿದ್ದಿದ್ದಾನೆ ಎಂದು ಹೇಳಿದ್ದಾರೆ..

 

Share Post