CrimeDistricts

ಶವಾಗಾರದಲ್ಲೇ ನಡೆಯುತ್ತಿತ್ತಾ ದೌರ್ಜನ್ಯ..?; ಸಿಬ್ಬಂದಿ ವಿರುದ್ಧ ದೂರು

ಮಡಿಕೇರಿ; ಇಲ್ಲಿನ  ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ  ಶವಾಗಾರದಲ್ಲಿ ವಿಕೃತ ಕಾಮದಾಟ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕರೋನಾ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆಂದು ಸನ್ಮಾನ ಮಾಡಿಸಿಕೊಂಡಿದ್ದ ಶವಾಗಾರ ಸಿಬ್ಬಂದಿ ಸೈಯ್ಯದ್‌ ಹುಸೇನ್‌ ವಿರುದ್ಧ ಈಗ ಆರೋಪ ಕೇಳಿಬಂದಿದೆ.

ಮಹಿಳಾ ಸಿಬ್ಬಂದಿಯನ್ನ ಶವಾಗಾರಕ್ಕೆ ಕರೆಸಿಕೊಂಡು ಶಾವಾಗಾರ ನೌಕರ ಸೈಯದ್‌ ಹುಸೇನ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಡೀನ್​ ಡಾ.ಕಾರ್ಯಪ್ಪಗೆ ದೂರು ನೀಡಿದ್ದಾರೆ.

ಸೈಯ್ಯದ್ ಹುಸೇನ್​ ಶವಾಗಾರಕ್ಕೆ ತರುವ ಮಹಿಳೆಯರ ಮೃತದೇಹಗಳನ್ನು ನಗ್ನಗೊಳಿಸಿ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಇತ್ತೀಚೆಗೆ ಆರೋಪಿ ಮನೆಯೊಂದಕ್ಕೆ ನುಗ್ಗಲು ಹೋದಾಗ ಸಿಕ್ಕಿಬಿದ್ದಿದ್ದು, ಆಗ ವಶಪಡಿಸಿಕೊಂಡ ಆತನ ಮೊಬೈಲ್‌ನಲ್ಲಿ ಫೋಟೋ, ವಿಡಿಯೋಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

Share Post