Bengaluru

ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಬೆಂಗಳೂರು; ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣ ಮಾಡಿದರು. 

ಪ್ರಗತಿಯ ಪ್ರತಿಮೆ ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ.  ಈ ಪ್ರತಿಮೆಯನ್ನು ರಾಮ್ ಸುತಾರಾ ಅವರು ನಿರ್ಮಾಣ ಮಾಡಿದ್ದಾರೆ.

ಈ ಪ್ರತಿಮೆ ನಿರ್ಮಾಣಕ್ಕೆ 92 ಟನ್‌ ಕಂಚನ್ನು ಬಳಸಲಾಗಿದೆ. 120 ಟನ್‌ ಉಕ್ಕನ್ನು ಪ್ರತಿಮೆಯ ಪೀಠ ಸ್ಥಾನಪನೆ ಬಳಸಲಾಗಿದೆ. ಕೆಂಪೇಗೌಡ ಪ್ರತಿಮೆಯ ಖಡ್ಗದ ತೂಕ  4 ಟನ್‌ ಇದೆ.  ಪೀಠದ ಎತ್ತರವೇ 18 ಅಡಿ ಇದೆ. ಇಲ್ಲಿ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಲಾಗಿದ್ದು, ಇದರ ವಿಸ್ತೀರ್ಣ 22 ಎಕರೆ ಇದೆ. ಪ್ರತಿಮೆಯನ್ನು 64 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ 20 ಕೋಟಿ ಖರ್ಚು ಮಾಡಲಾಗಿದೆ.

Share Post