CrimeDistricts

ಯುವತಿಯರಿಗೆ ಎಡಿಟೆಡ್ ಚಿತ್ರಗಳನ್ನು ತೋರಿಸಿ ಅತ್ಯಾಚಾರ; ಕರಾವಳಿಯಲ್ಲಿ ರೇಪಿಸ್ಟ್ ಗ್ಯಾಂಗ್

ಉತ್ತರ ಕನ್ನಡ; ಸುಂದರ ಯುವತಿಯರ ಸ್ನೇಹ ಬೆಳೆಸಿ, ಅವರ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಸಿ ರೇಪ್ ಮಾಡುತ್ತಿದ್ದ ಗ್ಯಾಂಗ್ ಪತ್ತೆಯಾಗಿದೆ.. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಕೃತ್ಯ ಎಸಗುತ್ತಿದ್ದ ಗ್ಯಾಂಗ್ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ..

  ಪ್ರೀತಿಯ ನಾಟಕವಾಡಿ ಹುಡುಗಿಯರ ಫೋಟೋಗಳನ್ನು ನಗ್ನವಾಗಿ ಎಡಿಟ್ ಮಾಡಿ ಹುಡುಗಿಯರಿಗೆ ತೋರಿಸಿ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ..

  ಹುಡುಗಿಯೊಬ್ಬಳು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಡಿಸಲು ಹೋದಾಗ ಪೋಲೀಸರ ಮೇಲೆ ಕಲ್ಲು ತುರಾಟ ಮಾಡಲಾಗಿದೆ.. ಆರೋಪಿಯ ತಾಯಿ ಕೂಡ ಕಲ್ಲು ತೂರಿ ಪರಾರಿಯಾಗಿದ್ದಾಳೆ..

   ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಬಂಧಿತ ಆರೋಪಿಯಾಗಿದ್ದಾನೆ.. ಈತನ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು..

 

Share Post