CrimeDistricts

ಮೈಸೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಳ; ರಾತ್ರಿ ನಡೆದಿದ್ದೇನು..?

ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಕಳೆದ ರಾತ್ರಿ ಕೂಡಾ ಒಂಟಿಕೊಪ್ಪಲಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಬಾಗಿಲನ್ನು ನಕಲಿ ಕೀ ಬಳಸಿ ತೆಗೆದಿರುವ ಕಳ್ಳರು ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

   ಒಂಟಿಕೊಪ್ಪಲಿನ ಗೋವಿಂದಪ್ಪ ಕಾಂಪ್ಲೆಕ್ಸ್ ಸಮೀಪದ ಮನೆಯ ಮುಂದೆ  ದೀಪಕ್ ಎಂಬುವರು ತಮ್ಮ ಕಾರು ನಿಲ್ಲಿಸಿದ್ದರು. ಅರ್ಧರಾತ್ರಿಯಲ್ಲಿ ಕಳ್ಳನೊಬ್ಬ ನಕಲಿ ಕೀ ಬಳಸಿ ಕಾರಿನ ಡೋರ್ ತೆಗೆದು ಒಳನುಗ್ಗಿದ್ದಾನೆ. ಕಾರಿನಲ್ಲಿದ್ದ ಎಲ್ಇಡಿ ಟಿವಿ, ಸ್ಪೀಕರ್‌ಗಳನ್ನ ಕದ್ದೊಯ್ದಿದ್ದಾನೆ.

ಇನ್ನು ನಿನ್ನೆ ಸಂಜೆ ಜಯಲಕ್ಷ್ಮೀಪುರಂನ ರಸ್ತೆ ಬದಿ ಪಾರ್ಕ್ ಮಾಡಿದ್ದ ಬೈಕ್ ಕಳ್ಳತನವಾಗಿದೆ. ಬೈಕ್ ಕಳ್ಳತನದ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share Post